Monday, September 16, 2013

ದೇವಾಲಯದ ಚಿನ್ನಕ್ಕೆ ಕೈಹಾಕುವ ಮುನ್ನ…

ದೇವಾಲಯದ ಚಿನ್ನಕ್ಕೆ ಕೈಹಾಕುವ ಮುನ್ನ…

ದೇಶದ ಅಸ್ಮಿತೆಗೆ ಸವಾಲಾಗಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ೬೫ ವರ್ಷಗಳಿಂದ ಹುಡುಕದೇ ಈಗ ಏಕಾಏಕಿ ಮಂದಿರಗಳು ಕೂಡಿಟ್ಟಿರುವ ಚಿನ್ನವನ್ನು ಕರಗಿಸಿ ರಿಸರ್ವ್ ಬ್ಯಾಂಕಿಗೆ ಕೊಡಬೇಕೆನ್ನುವುದು ಒಪ್ಪಬಹುದಾದ ಮಾತೇನು? ಸತ್ಯ ಹೇಳಿ. ಸರ್ಕಾರಕ್ಕೆ ಕೊಟ್ಟ ದುಡ್ಡು ಮರಳಿ ಬರುವ ವಿಶ್ವಾಸ ನಿಮಗಿದೆಯಾ? ದೇಶ ಸಂಕಟದಲ್ಲಿರುವಾಗ ದೇವಸ್ಥಾನದ್ದೇನು, ಸ್ವಂತದ ಹಣವೂ ಸಮರ್ಪಣೆಯಾಗಲೇಬೇಕು. ಆದರೆ ಮೊದಲು ನಾವು ಕೂಡಿಟ್ಟ ಹಣ ಹೊರಗೆ ಬರಬೇಕು. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಕೂಡಿಟ್ಟ ಹಣದ ಕುರಿತಂತೆ ಗಂಭೀರ ಚರ್ಚೆಗಳಾಗುತ್ತಿವೆ. ಹಠ ಹಿಡಿದು ಅದನ್ನು ತರೋಣ. ಕಳೆದ ವರ್ಷ ಆoಜ್ಞಿಛಿoo ಜ್ಞಿoಜಿbಛ್ಟಿ ಪತ್ರಿಕೆ ಶ್ರೀಮಂತ ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಸರಿಸುಮಾರು ಇಪ್ಪತ್ತು ಬಿಲಿಯನ್ ಡಾಲರ್‌ಗಳಷ್ಟು ಆಸ್ತಿ ಹೊಂದುವ ಮೂಲಕ ಸೋನಿಯಾ ಗಾಂಧಿ ನಾಲ್ಕನೇ ಸ್ಥಾನದಲ್ಲಿದ್ದರು. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಹಗರಣಗಳ ಸರಮಾಲೆಯನ್ನೇ ಧರಿಸಿಕೊಂಡಿದೆ. ಅಂದರೆ ಇನ್ನೊಂದಷ್ಟು ಬಿಲಿಯನ್ ಡಾಲರ್‌ಗಳು ಸೇರಿರಲಿಕ್ಕೆ ಸಾಕು. ಈ ಹಣ ತರೋದು ಬೇಡವಾ? ಕೋಟ್ಯಂತರ ರೂಪಾಯಿಗಳ ಅಧಿಕೃತ ಆಸ್ತಿಯನ್ನು ಘೋಷಣೆ ಮಾಡಿ ಅದರ ಹತ್ತು ಪಟ್ಟಾದರೂ ಕಾಣದಂತೆ ಇಟ್ಟಿರುವವರ ಹಣವನ್ನು ವಶಪಡಿಸಿಕೊಳ್ಳೋದು ಬೇಡವಾ?

ಸರಿ. ತೀರಾ ಇಷ್ಟೆಲ್ಲ ಅಗತ್ಯ ಇದೆ ಅನ್ನೋದೇ ಆದರೆ, ದೆಹಲಿಯಲ್ಲಿ ರಾಷ್ಟ್ರಪತಿಗಳ ವಾಸಕ್ಕೆ ಅಂತ ಮುನ್ನೂರಕ್ಕೂ ಹೆಚ್ಚು ಕೋಣೆಗಳ ಅರಮನೆ, ಹೆಕ್ಟೇರುಗಟ್ಟಲೆ ಗಾರ್ಡನ್ನು ಇವುಗಳ ರಿಯಲ್ ಎಸ್ಟೇಟ್ ಮೌಲ್ಯವೇ ೨೦೦೭ರ ವರದಿಯಂತೆ ಹದಿನಾರು ಸಾವಿರ ಕೋಟಿ! ಈಗ ಮೂರ‍್ನಾಲ್ಕು ಪಟ್ಟಾದರೂ ಜಾಸ್ತಿಯಾಗಿರಲಿಕ್ಕೆ ಸಾಕು. ಮಾರಿಬಿಡೋಣ ಬಿಡಿ! ಹೋಗಲಿ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾರ ಸಮಾಧಿ ಸ್ಥಳ ೧೪೧ ಎಕರೆ ವಿಸ್ತಾರಕ್ಕೆ ಹಬ್ಬಿದೆಯಲ್ಲ; ಆಯಕಟ್ಟಿನ ಜಾಗದಲ್ಲಿ ಸಮಾಧಿಗಾಗಿ ಇಷ್ಟೊಂದು ಜಾಗವೇಕೆ? ದೇಶವೇ ಸಂಕಟದಲ್ಲಿರುವಾಗ ಗೋರಿಗಳ ಮುಂದೆ ಭಜನೆಗೆ ಸಮಯವೆಲ್ಲಿ? ನಡೀರಿ ಸಮಯ ಬಂದರೆ ಮಾರಿಬಿಡೋಣ. ತೀರಾ ಭಾವನಾತ್ಮಕ ಸಂಬಂಧ ಅನ್ನೋದಾದರೆ ಗಾಂಧೀಜಿಯ ಸಮಾಧಿಸ್ಥಳ ಉಳಿಸಿಕೊಂಡು, ಉಳಿದಿಬ್ಬರದನ್ನು ರಿಯಲ್ ಎಸ್ಟೇಟಿಗೆಂದು ಕೊಟ್ಟುಬಿಟ್ಟರೆ ಗಂಟೇನು ಹೋಗುತ್ತೆ ಅಂದರೆ ಕಾಂಗ್ರೆಸ್ಸಿಗರು ಸುಮ್ಮನಿರುತ್ತಾರಾ?
ನೀವು ನಾಯಕರೆಲ್ಲ ತಿರುಗಾಡಲಿಕ್ಕೆ, ಉಳಕೊಳ್ಳಲಿಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ ಅದನ್ನು ಕಡಿಮೆ ಮಾಡಿ ; ನಿಮ್ಮ ಸಂಬಳವನ್ನು, ಪೆನ್ಷನ್‌ಗಳನ್ನು ತಡೆ ಹಿಡಿದು ದೇಶಕ್ಕೆ ಕೊಡಿ ಅಂದರೆ ಇವರೆಲ್ಲ ಕೇಳುತ್ತಾರೇನು?

ಆದರೆ ನಾವೀಗ ಗಟ್ಟಿಯಾಗಿ ನಿಲ್ಲೋಣ. ಮಂದಿರಗಳ ಚಿನ್ನ ಕೊಡುವ ಮುನ್ನ ನೀವು ವಿದೇಶಗಳಲ್ಲಿ ಕೂಡಿಟ್ಟ ಹಣ ತನ್ನಿರೆಂದು ಆಗ್ರಹಿಸೋಣ. ಈಗ ಸಮಯ ಬಂದಿದೆ. ಸುಮ್ಮನಿದ್ದರೆ ಸೋಮನಾಥ ಮಂದಿರಕ್ಕೆ ಬಂದ ದುರ್ಗತಿ ತಿರುಪತಿಗೂ ಬಂದರೆ ಅಚ್ಚರಿಯಿಲ್ಲ, ಎಚ್ಚರಿಕೆ! - ಚಕ್ರವರ್ತಿ ಸೂಲಿಬೆಲೆ

Take Mouse over on Dharma Granth and Click Like

Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group

.














No comments:

Post a Comment