Prime Minister of the 2nd largest country in the world (Canada) Justin Trudeau walking on Washington street with his wife and children without security holding his little baby in arm. What south asian leaders can learn from this?
Tuesday, March 15, 2016
ಬರ್ಮುಡಾ ಟ್ತೈ ಆ್ಯಂಗಲ್ ರಹಸ್ಯ ಬಯಲು?
ಬರ್ಮುಡಾ ಟ್ತೈ ಆ್ಯಂಗಲ್ ರಹಸ್ಯ ಬಯಲು?
ಏಜೆನ್ಸೀಸ್ | Mar 15, 2016, 04.24 AM IST
ಹೊಸದಿಲ್ಲಿ: ಬರ್ಮುಡಾ ಟ್ರೈ ಆ್ಯಂಗಲ್ ಜಗತ್ತಿನ ಅಪಾಯಕಾರಿ ಭಾಗ. ನಾರ್ವೆ ಕಡಲ ತೀರದ ಬೆರೆಂಟ್ಸ್ ಸಮುದ್ರ ವ್ಯಾಪ್ತಿಯಲ್ಲಿ ಬರುವ ಸಮುದ್ರ ಪ್ರದೇಶವೇ ಈ ಬರ್ಮುಡಾ ಟ್ತೈ ಆ್ಯಂಗಲ್.
ಇಲ್ಲಿ 12ಕ್ಕೂ ಹೆಚ್ಚು ಹಡಗುಗಳು ಹಾಗೂ ವಿಮಾನಗಳು ಈ ಪ್ರದೇಶದಲ್ಲಿ ಕಾಣೆಯಾಗಿವೆ. ಇದುವರೆಗೂ ಈ ಪ್ರದೇಶದಲ್ಲಿ ಹೀಗೆ ಕಾಣೆಯಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹಾಗಾದರೆ,ಕಣ್ಮರೆಗೆ ಕಾರಣ ಏನು? ಹೀಗೆ ನಾಪತ್ತೆಯಾಗುವ ಹಿಂದಿನ ರಹಸ್ಯ ಏನು ಎಂಬುದನ್ನು ಭೇದಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ರಹಸ್ಯವನ್ನು ಬೆನ್ನಟ್ಟಿದ ಆರ್ಕಟಿಕ್ ಯುನಿವರ್ಸಿಟಿ ಆಫ್ ನಾರ್ವೆ ಸಂಶೋಧಕರು ಕಾರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಾಪತ್ತೆಗೆ ಕಾರಣ ಏನು? : ಸಮುದ್ರದಲ್ಲಿನ ಹೈಡ್ರೇಟ್ ಗ್ಯಾಸ್ ಪ್ರಬಲ ಪ್ರತಿಕ್ರಿಯೆಗಳಿಂದ ಈ ವ್ಯಾಪ್ತಿಯಲ್ಲಿ ಬರುವ ಹಡಗು, ವಿಮಾನಗಳು ಒಮ್ಮಿಂದೊಮ್ಮೆಲೆ ಸಂಭವಿಸುವ ಮಹಾ ನೀರಿನ ಬುಗ್ಗಿಗಳ ಅಬ್ಬರಕ್ಕೆ ಸಿಲುಕಿ ನೀರಿನಾಳಕ್ಕೆ ತಲುಪುತ್ತವೆ. ಈ ಮೂಲಕ ಅವು ಮುಂದೆ ಸಂಚರಿಸಲಾರದೆ, ಹೊರಗೆ ಬರಲಾಗದೇ ಅಲ್ಲೇ ಉಳಿದು ಬಿಡುತ್ತವೆ ಎಂಬ ಊಹೆಯನ್ನು ಸಂಶೋಧಕರು ಮಾಡಿದ್ದಾರೆ.
ಟ್ತೈ ಆ್ಯಂಗಲ್ನ ವ್ಯಾಪ್ತಿ ಎಷ್ಟು?: ಸಂಪದ್ಭರಿತ ಅನಿಲ ಸಂಗ್ರಹ ಹೊಂದಿರುವ ನಾರ್ವೆಯ ಈ ಪ್ರದೇಶದಲ್ಲಿ ಸುಮಾರು 800 ಮೀಟರ್ ಅಗಲ ಹಾಗೂ 45 ಮೀಟರ್ ಆಳದ ಕುಳಿಗಳಿದ್ದು, ಮಿಥೇನ ಸಂಚಯನಗಳ ಕೇಂದ್ರ ನಿರ್ಮಾಣಗೊಂಡಿದೆ. ಸಮುದ್ರದ ನೆಲದ ಆಳ ಹಾಗೂ ನೀರಿನ ಮೇಲ್ಮೈನ ಒಳಗಡೆ ಈ ಮಿಥೇನ್ ಸೋರಿಕೆ ಆಗುತ್ತದೆ ಎನ್ನಲಾಗುತ್ತಿದೆ. ಈ ಆಳವಿಲ್ಲದ ಸಮುದ್ರಗಳಲ್ಲಿ ಮಿಥೇನ್ ಸೋರಿಕೆಯಿಂದ ಬಿಸಿ ಕುಳಿಗಗಳಲ್ಲಿ ಇದ್ದಕ್ಕಿದ್ದಂತೆ ದೊಡ್ಡ ನೀರಿನ ಬುಗ್ಗಿಗಳು ಸೃಷ್ಟಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಬರುವ ಹಡಗುಗಳು ಈ ದೊಡ್ಡ ನೀರಿನ ಬುಗ್ಗಿಗಳ ಪ್ರಪಾತದಲ್ಲಿ ಸಿಲುಕಿ ಹೊರಗೆ ಬರದೇ ಅಲ್ಲೇ ಹೂತು ಹೋಗುತ್ತವೆ ಎಂದು ವಿವಿ ಸಂಶೋಧಕರು ಅಧ್ಯಯನದಿಂದ ಕಂಡು ಕೊಂಡಿದ್ದಾರೆ.
ವಿಜ್ಞಾನಿಗಳ ಹೇಳಿಕೆಯಂತೆ ಈ ಪ್ರದೇಶದಲ್ಲಿ ಆಗುವ ಈ ಹೈಡ್ರೇಟ್ ಪ್ರತಿಕ್ರಿಯೆಗಳು ಇದ್ದಕ್ಕಿದ್ದಂತೆ ಸಂಭವಿಸುವುದರಿಂದ ಅಗಾಧ ಪ್ರಮಾಣದ ಹಾನಿ ಮಾಡುತ್ತವೆಯಂತೆ. ಅಷ್ಟೇ ಅಲ್ಲ ಇದೊಂದು ಪರಮಾಣು ವಿದಳನ ಪ್ರಕ್ರಿಯೆಯಂತೆ ಅಗಾಧ ಶಕ್ತಿ ಹೊಂದಿದೆಯಂತೆ.ಈ ಬಗ್ಗೆ ಮುಂದಿನ ತಿಂಗಳು ಯೂರೋಪಿಯನ್ ಜಿಯೋ ಸೈನ್ಸ್ ಯೂನಿಯನ್ ಸಭೆಯಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಈ ಬಗೆಗಿನ ವರದಿ ಬಿಡುಗಡೆ ಮಾಡಲಾಗುವುದು. ಬಿರುಗಾಳಿಯಂತೆ ಏಳುವ ನೀರಿನ ಬುಗ್ಗೆ ಗಳು ಅವುಗಳಿಂದ ಹಡಗುಗಳ ಮೇಲೆ ಆಗುವ ಅಪಾಯದ ಬಗ್ಗೆ ವಿವರಿಸಲಿದ್ದಾರೆ ಎಂದು ವಿವಿ ಮೂಲಗಳು ಹೇಳಿವೆ.
http://m.vijaykarnataka.com/news/world/bermuda-triangle-mystery-almost-solved/articleshow/51397827.cms
Sunday, March 13, 2016
ಅಬ್ಬಬ್ಬಾ! ಹುಟ್ಟುಹಬ್ಬಕ್ಕೆ ಖರ್ಚಾಗಿದ್ದು 40 ಕೋಟಿ ರೂ.
ಅಬ್ಬಬ್ಬಾ! ಹುಟ್ಟುಹಬ್ಬಕ್ಕೆ ಖರ್ಚಾಗಿದ್ದು 40 ಕೋಟಿ ರೂ.
ಮದುವೆ, ಹುಟ್ಟುಹಬ್ಬ ಸೇರಿದಂತೆ ಹಲವು ಸಂದರ್ಭಗಳು ವಿಶೇಷವಾದವು. ಇಂತಹ ಸಂದರ್ಭದ ಕ್ಷಣಗಳು ಸದಾ ನೆನಪಿನಲ್ಲಿರಬೇಕೆಂಬ ಬಯಕೆ ಸಹಜವಾಗಿರುತ್ತದೆ. ಅದರಲ್ಲಿಯೂ ಪೋಷಕರು ತಮ್ಮ ಪ್ರೀತಿಪಾತ್ರರ
ಮದುವೆ, ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಇಷ್ಟಪಡುತ್ತಾರೆ.
ಇಲ್ಲೊಬ್ಬ ಉದ್ಯಮಿ ತನ್ನ ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಬರೋಬ್ಬರಿ 40.32 ಕೋಟಿ ರೂಪಾಯಿ ವೆಚ್ಛ ಮಾಡಿದ್ದಾನೆ. ಅಮೆರಿಕದ ಸ್ಯಾನ್ ಅಂಟೋನಿಯಾದಲ್ಲಿ ಕಾನೂನು ವಿಷಯಕ್ಕೆ ಸಂಬಂಧಿಸಿದ ಸಂಸ್ಥೆಯೊಂದನ್ನು
ಹೊಂದಿರುವ ಹೆನ್ರಿ ತನ್ನ ಪುತ್ರಿ 15ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾರೆ. 15 ವರ್ಷದ ಪುತ್ರಿಯಾಗಿರುವ ಮಯಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಹೆನ್ರಿ ಎಲ್ಲರ
ಹುಬ್ಬೇರುವಂತೆ ಮಾಡಿದ್ದಾರೆ.
ಅಮೆರಿಕದಲ್ಲಿ 15 ವರ್ಷಕ್ಕೆ ಕಾಲಿಟ್ಟರೆ, ಹೆಣ್ಣುಮಕ್ಕಳಿಗೆ ಜವಾಬ್ದಾರಿ ಬರುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಹಾಗಾಗಿ, 15ನೇ ವರ್ಷದ ಬರ್ತಡೇಗೆ ವಿಶೇಷ ಮಹತ್ವವಿದೆ ಎನ್ನಲಾಗಿದೆ. ಈ ಹುಟ್ಟುಹಬ್ಬದ ಸಮಾರಂಭಕ್ಕೆ ಖ್ಯಾತ ಪಾಪ್ ಗಾಯಕ ಪಿಟ್ ಬುಲ್, ಜೋನ್ಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಲವಾರು ವಿಶೇಷತೆಗಳು ಕೂಡ ಇದ್ದವು.
http://kannadadunia.com/live-news/international/birthday-businessmen-program-special/#.VuV_AT0XIsQ.facebook
Saturday, March 12, 2016
Congratulations to the relentless volunteer
Congratulations to the relentless volunteer...Blessed are those who have worked with this man who doesn't seek anything in return....
NAMMA BENGALUREAN OF THE YEAR - N S Ramakanth, for his inspirational service to the city, especially in the area of waste management, and his tireless commitment to working with the BBMP and its workers, and also with communities to encourage more and more of them to take up responsible SWM.
Thursday, March 10, 2016
2 Girls from Gujarat designed a very innovative idea of painting Zebra crossing -gives illusion and alerts drivers
2 Girls from Gujarat designed a very innovative idea of painting Zebra crossing -gives illusion and alerts drivers
ನಮ್ಮ #ಸನಾತನಧರ್ಮ ಹೇಳುತ್ತದೆ ನೀನು ಅಲ್ಲನನ್ನಾದರು ನಂಬು ಅಥವಾ ಏಸುವನ್ನಾದರು ನಂಬು ಒಟ್ಟು ಯಾರಿಗೂ ತೊಂದರೆ ಕೊಡದೆ ಧರ್ಮ ನಿಷ್ಠೆಯಿಂದ ಬದುಕು ಎಂದು ಸಾರುವ ಏಕೈಕ ಧರ್ಮ ನನ್ನದು
#ಇಸ್ಲಾಂ ಹೇಳುತ್ತದೆ= ಲಾ ಇಲಾಹ ಇಲ್ಲಲ್ಲಾ ಎಂದು ಅಂದರೆ #ಅಲ್ಲ ಬಿಟ್ಟು ಈ ಜಗತ್ತಿನಲ್ಲಿ ಬೇರೆ ದೇವರಿರಲು ಸಾಧ್ಯವಿಲ್ಲ ಎಂದು....
ಹಾಗೆ ಅಲ್ಲನನ್ನು ನಂಬುವರು ಮುಸಲ್ಮಾನರು ಹಾಗು ನಂಬದೆ ಇರುವವರು ಕಫೀರರು ಎಂದು ಗುರುತಿಸಿದ್ದಾರೆ ......
ಇದೇ ರೀತಿ
#ಕ್ರೈಸ್ರ ಧರ್ಮ ಹೇಳುತ್ತದೆ #ಏಸುನನ್ನು ನಂಬು ಎಂದು ನಂಬಿದರೆ ನೀನು ಕ್ರೈಸ್ತ, ನಂಬದಿದ್ದರೆ #ಸೈತಾನ ಎಂದು ಹೇಳುವರು....
¶ಆದರೆ ನಮ್ಮ #ಸನಾತನಧರ್ಮ ಹೇಳುತ್ತದೆ ನೀನು ಅಲ್ಲನನ್ನಾದರು ನಂಬು ಅಥವಾ ಏಸುವನ್ನಾದರು ನಂಬು ಒಟ್ಟು ಯಾರಿಗೂ ತೊಂದರೆ ಕೊಡದೆ ಧರ್ಮ ನಿಷ್ಠೆಯಿಂದ ಬದುಕು ಎಂದು ಸಾರುವ ಏಕೈಕ ಧರ್ಮ ನನ್ನದು....
#ವಸುದೈವ_ಕುಟುಂಬಕಮ್ ಅಂದರೆ ಪ್ರಪಂಚದಲ್ಲಿರು ನಾವು ಎಲ್ಲರೂ ಕೂಡ ಒಂದೇ ಕುಟುಂಬದವರು ಎಂದು ಸಾರಿ ಸಾರಿ ಹೇಳುವ ಏಕೈಕ ಧರ್ಮ ನನ್ನದು.....
#ಸರ್ವೇಭವಂತು_ಸುಖಿನಹಃ ಅಂದರೆ ತನ್ನ ಸ್ವಾರ್ಥವನ್ನು ಬಿಟ್ಟು ಎಲ್ಲರೂ ಚೆನ್ನಾಗಿರಲಿ ಎಂದು ಕೇಳಿಕೊಳ್ಳುವ ಹಿಂದುಗಳು ನಾವು....
ಈ ಜನ್ಮದಲ್ಲಿ ನೀನು ಹಿಂದುವಾಗಿರುವೆ ಎಂದರೆ ಅದು ನೀನು ಮಾಡಿದ ಎಷ್ಟೋ ಜನ್ಮಗಳ ಪುಣ್ಯದ ಫಲದಿಂದ ಮಾತ್ರ...
#ಹೆಮ್ಮೆಯಿಂದ_ಹೇಳು_ನಾನೊಬ್ಬ_ಹಿಂದು_ಎಂದು ...
Wednesday, March 9, 2016
ಗೋಡೆ ಗಡಿಯಾರವು ಪ್ರತಿಯೊ೦ದು ಮನೆಯಲ್ಲಿಯೂ ಇರಲೇಬೇಕಾದ ಅತ್ಯಾವಶ್ಯಕ ವಸ್ತುವಾಗಿದೆ
ಗೋಡೆ ಗಡಿಯಾರವು ಪ್ರತಿಯೊ೦ದು ಮನೆಯಲ್ಲಿಯೂ ಇರಲೇಬೇಕಾದ ಅತ್ಯಾವಶ್ಯಕ ವಸ್ತುವಾಗಿದೆ. ಕಾಲಕ್ರಮೇಣ, ಬದಲಾಗುತ್ತಿರುವ ಫ್ಯಾಷನ್ ಜಗತ್ತಿಗನುಗುಣವಾಗಿ ಅದಕ್ಕೆ ತಕ್ಕ೦ತಹ ವಿನ್ಯಾಸಗಳುಳ್ಳ ಗೋಡೆ ಗಡಿಯಾರಗಳು... http://kannada.boldsky.com/home-garden/decor/2014/vastu-tips-remember-while-hanging-wall-clocks-008814.html
Saturday, March 5, 2016
ಹೊಳಪನ್ನು ಬಾರಿಬಾರಿಯೂ ಹೆಚ್ಚಿಸಿಕೊಂಡು ಪ್ರಧಾನಿಪಟ್ಟವೇರಿದ ಮೋದಿ ಎಂಬ ‘ಮಿಂಚು’ಹುಳು ಆಯ್ದುಕೊಂಡಿದ್ದು ಎರಡನೆಯ ಆಯ್ಕೆಯನ್ನು!
ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು. ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು. ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು. ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು. ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ, ನಿನ್ನನ್ನು ಹೇಗೂ ತಿಂದು ಮುಗಿಸುವವನೇ. ಪ್ರಶ್ನೆ ಕೇಳು ಪರವಾಇಲ್ಲ’ ಎಂದಿತು. ಮಿಂಚುಹುಳು ಮೊದಲ ಪ್ರಶ್ನೆಯಾಗಿ ‘ನಾನು ನಿನ್ನ ಆಹಾರಸರಪಳಿಯಲ್ಲಿ ಇದ್ದೇನೆಯೇ?’ ಎಂದು ಕೇಳಿತು. ಇಲ್ಲವೆಂದಿತು ಸರ್ಪ. ‘ನಾನು ನಿನಗೇನಾದರೂ ತೊಂದರೆ ಮಾಡಿದೆನೇ ಅಥವಾ ಕೆಣಕಿದೆನೇ?’ ಮಿಂಚುಹುಳುವಿನ ಎರಡನೆಯ ಪ್ರಶ್ನೆ. ಇಲ್ಲ ಎಂದುತ್ತರಿಸಿತು ಸರ್ಪ. ‘ಮತ್ತೇಕೆ ನನ್ನನ್ನು ಕೊಂದು ತಿನ್ನಬೇಕೆಂದಿದ್ದೀ?’ ಮೂರನೆಯ ಪ್ರಶ್ನೆ ಕೇಳಿತು ಮಿಂಚುಹುಳು. ಆಗ ಸರ್ಪ ಹೇಳಿತು: ‘ಏಕೆಂದರೆ ನೀನು ಆ ರೀತಿ ಮಿನುಗುವುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿಲ್ಲ.’
ನಮ್ಮ ಬದುಕಿನಲ್ಲಿಯೂ ನಮಗೆ ಇಂಥ ಸರ್ಪಗಳು ಎದುರಾಗುತ್ತವೆ. ನಮ್ಮ ಬಾಳಿನ ಹೊಳಪನ್ನು ಕಂಡು ಹೊಟ್ಟೆಯುರಿಯುವ, ನಾಶ ಮಾಡಲೆತ್ನಿಸುವ ವಿಷಸರ್ಪಗಳು. ಅವುಗಳನ್ನು ಎದುರಿಸಲಿಕ್ಕೆ ನಮಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮ್ಮ ಹೊಳಪನ್ನು ನಿಲ್ಲಿಸಿಬಿಡುವುದು, ಆಗ ಯಾವ ಸರ್ಪವೂ ನಮ್ಮ ಬೆನ್ನಟ್ಟುವುದಿಲ್ಲ. ಎರಡನೆಯ ಆಯ್ಕೆಯೆಂದರೆ ನಮ್ಮ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಮತ್ತು ಆ ಹೊಳಪಿನಿಂದಲೇ ಸರ್ಪಗಳನ್ನು ಮಣಿಸುವುದು. ಮಾಧ್ಯಮಗಳೆಂಬ ಕಾರ್ಕೋಟಕಗಳು ಎಷ್ಟೇ ಬೆನ್ನಟ್ಟಿದರೂ ಧೃತಿಗೆಡದೆ, ಮಣಿಶಂಕರವೆಂಬ ಮುದಿಸರ್ಪವು ಚಾಯ್ವಾಲಾ ಎಂದು ಮೂದಲಿಸಿದರೂ ಜಗ್ಗದೆ, ಇಟಾಲಿಯನ್ ನಾಗಿಣಿಯು ಮೌತ್ಕಾ ಸೌದಾಗರ್ ಎಂದು ಜರಿದರೂ ಕಂಗೆಡದೆ, ಹೊಳಪನ್ನು ಬಾರಿಬಾರಿಯೂ ಹೆಚ್ಚಿಸಿಕೊಂಡು ಪ್ರಧಾನಿಪಟ್ಟವೇರಿದ ಮೋದಿ ಎಂಬ ‘ಮಿಂಚು’ಹುಳು ಆಯ್ದುಕೊಂಡಿದ್ದು ಎರಡನೆಯ ಆಯ್ಕೆಯನ್ನು!
ಈ ವಾರದ (06Mar2016) ತಿಳಿರುತೋರಣ ಅಂಕಣ...
(ಮೋದಿಯವರ ಕುರಿತು ಅಲ್ಲ! ಮಿಂಚುಹುಳುವಿನ ಬಗ್ಗೆ ಒಂದು ಲಹರಿ :-) )- "ಹುಳುವಾಗಿ ಹುಟ್ಟಿ ಲೋಕವ ಬೆಳಗುತಿರಲಿಂತು..."
JPG imageನಲ್ಲಿ ಅಕ್ಷರಗಳನ್ನು ಓದುವುದು ಕಷ್ಟವಾದರೆ Unicode version ಇಲ್ಲಿದೆ:
http://www.vishwavani.news/tiliru-torana-shreevathsa-joshi/
ಅಥವಾ, ಓದುವುದಕ್ಕಿಂತ ಕೇಳುವುದು ಸುಲಭ ಅಂತ ಅನಿಸಿದರೆ-
Podcast (Audio): https://soundcloud.com/srivathsajoshi/tt06Mar2016
ಎಲ್ಲ ಅಭಿಪ್ರಾಯ, ಸಲಹೆ ಸೂಚನೆ ಟೀಕೆಟಿಪ್ಪಣಿಗಳಿಗೆ ಸ್ವಾಗತವಿದೆ. :-)
ನಿಮ್ಮ ವಾರಾಂತ್ಯ ಚೆನ್ನಾಗಿರಲಿ.
These people can handover the nation to one family for 60 years
Dear Prime Minister,
We don't deserve a person like you.Major portion of the country's population is not valuing your work. You work for more than 16 hours a day.. Sacrificing your sleep for the betterment of this country.. But you will never receive appreciation for the same. You will still be blamed for small silly issues.. These people can handover the nation to one family for 60 years but won't give you 5 peaceful years to work.
The reason being, this country is full of fake pseudo intellectuals, hungry and lazy humans. They might not able to run their small family of 4 people.. But will definitely advise you on how you should run this nation. Waah!(applaud)
People are dying to take revenge from you as if you have done the world's most dangerous crime of becoming our Prime Minister. See the Bihar results.. They have chosen 8,9 and 12th standard passed/failed candidates.. But not the ones who represented you. Why? I've heard people saying "agar aaj election ho..toh Modi haar jayenge".. Why? Even after working so hard for the betterment of your beloved nation.. How can one listen to all this for a person of your stature!
They are just not able to accept the fact that our country is empowering itself.. Country is progressing in every way.. No.. They don't want all this.. All they want is Toor Daal @ 1/- per kg and onions for free. Trust me, try doing this and see where you reach!! They are accustomed to the corruption in this country and they can't digest the slow and positive change the country is going through.
I'm saddened but sure.. We won't be able to see you in 2019 because they will elect some Pappu G to run this country who apparently cannot run for a marathon!
People can become slaves of the person who provides Daal chawal and potatoes for free.. And we get to know this from our history. Nobody wants to change.. But everyone wants a change.
People having smartphones in hand with 3G packages.. Talk about the so called " badhti mehangayi"!! Like seriously? They use a 297 recharge for a 3G plan.. And they are affected by the increase in price of Toor daal? Like really??
Sir, you have been stated in the top 10 powerful personalities of the world.. But it just doesn't matter to them. Majority of people are deaf and blind.
You should be relaxing at this age.. And enjoying life.. Your hard work.. Commitment and dedication have no value here..
disappointment
Jai Hind.
---------------------
(via email)
ಬಹುತೇಕ ಎಲ್ಲಾ ಸಮಸ್ಸೆಗಳಿಗೆ ನಾವೇ ಕಾರಣ ಕರ್ತರಾಗಿದ್ದೇವೆ
ಬಹುತೇಕ ಎಲ್ಲಾ ಸಮಸ್ಸೆಗಳಿಗೆ ನಾವೇ ಕಾರಣ ಕರ್ತರಾಗಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮತದಾರನು ನಿಜವಾದ ಪ್ರಭು. ಈ ಮಾತನ್ನು ಸಂತೋಷಕ್ಕೋಸ್ಕರ ಅಥವಾ ನಮ್ಮ ನೆಮ್ಮದಿಗೋಸ್ಕರ ನಾವೇ ಹೇಳಿ ಕೊಳ್ಳಬೇಕು. ಈ ದೇಶದ ಪ್ರಜಾಪ್ರಭುತ್ವದಲ್ಲಿ ಪ್ರಜೆಯಾದವನಿಗೆ ಕವಡೆ ಕಾಸಿನಷ್ಟು ಕಿಮ್ಮತ್ತಿಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಚುನಾವಣೆಗಳು ಹತ್ತಿರವಾದಾಗ ಜನರು ಅವರ ಕಣ್ಣಿಗೆ ಬೀಳುತ್ತಾರೆ. ಆ ಸಮಯದಲ್ಲಿ ಪ್ರಜೆಗಳಿಗೆ ಏನಿಲ್ಲದ ವಾಗ್ದಾನ ಆಶ್ವಾಸನೆಗಳನ್ನು ನೀಡಿ ಅವನನ್ನು ಮರಳು ಮಾಡುತ್ತಾರೆ. ಅದರಲ್ಲಿಯೂ ನಡೆಯುವ ಎಲ್ಲಾ ಚುನಾವಣೆಗಳು ಜಾತಿ ಆಧಾರದ ಮೇಲೆ ನಡೆಯುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ಜಾತಿಯನ್ನೇ ಅವಲಂಬಿಸಿ ಆ ಜಾತಿಯ ಮುಖಂಡರನ್ನು ಆಯ್ಕೆ ಮಾಡಿ ಚುನಾವಣೆ ಕಣದಲ್ಲಿ ನಿಲ್ಲಿಸುವುದು ನಿಜಕ್ಕೂ ವಿಷ ವರ್ತುಲವಾಗಿದೆ. ವ್ಯವಸ್ಥೆ ಈ ಸೀಳು ಹಾದಿಯಲ್ಲಿ ನಡೆದಿರಬೇಕಾದರೆ, ಜನಸಾಮಾನ್ಯನ ಜ್ವಲಂತ ಸಮಸ್ಸೆಗಳು ಬಗೆಹರಿಯುವುದಂತು ಗಗನ ಕುಸುಮವೇ ಸರಿ. ಜನಪ್ರತಿನಿಧಿಗಳಿಂದ ಯಾವುದೇ ಸಾಮಾಜಿಕ ಕಾರ್ಯುಗಳನ್ನು ಕಾರ್ಯಗತ ಮಾಡುವುದು ಅಷ್ಟೇನು ಸುಲಭದ ಕೆಲಸವಲ್ಲ. ಬಹುತೇಕ ಅಧಿಕಾರಕ್ಕೇರುವ ರಾಜಕಾರಣಿಗಳು ಜನರ ಪ್ರತಿನಿಧಿಗಳೆಂಬುದು ಕನಸಿನ ಮಾತಾಗಿದೆ. ಈ ರಾಷ್ಟ್ರದಲ್ಲಿ ಒಂದು ಸಣ್ಣ ಚುನಾವಣೆಯನ್ನೂ ಸಹ ಎದುರಿಸಬೇಕಾದರೆ ಲಕ್ಷ, ಕೋಟಿಗಟ್ಟಲೆ ಹಣ ಬೇಕು. ಪರಿಸ್ಥಿತಿ ಇಷ್ಟು ಗಂಭೀರವಾಗಿರಬೇಕಾದರೆ, ಈ ರಾಷ್ಟ್ರದಲ್ಲಿ ನ್ಯಾಯಬಧ್ಧ ಹಾಗೂ ಮುಕ್ತ ಚುನಾವಣೆ ನಡೆಯುವುದಂತು ದೂರದ ಮಾತು. ಚುನಾವಣೆ ಬಯಸುವ ಬಹುತೇಕ ಮಂದಿ ಒಂದಲ್ಲ ಒಂದು ರಾಜಕೀಯ ಪಕ್ಷದ ಕೈಗೊಂಬೆಯಾಗಿರುವುದು ಹಿಡಿದ ಕನ್ನಡಿಯಂತಿದೆ. ಅದರಲ್ಲಿಯೂ ಬುದ್ದಿಜೀವಿಗಳೆನಿಸಿಕೊಂಡ ವಿಚಾರವಂತರ ಧೋರಣೆಗಳನ್ನು ಕಂಡರೆ ಖಂಡಿತ ಸಿಡಿಲು ಬಡಿದಂತೆಯೇ ಸರಿ. ಈ ಎಲ್ಲಾ ಅನಿಷ್ಠಗಳಿಗೆ ನಾವೇ ಮುಖ್ಯ ಕಾರಣರಾಗಿದ್ದೇವೆ. ಅದರಲ್ಲಿಯೂ ಸಾಮಾನ್ಯ ಜನರು ಸಮಸ್ಸೆಗಳನ್ನು ವಿರೋಧಿಸಲು ಅಥವಾ ಪ್ರತಿಭಟಿಸಲು ಒಂದಾಗುವುದೇ ಕಷ್ಟ. ಎಲ್ಲರೂ ನಮಗೆ ಯಾಕೆ ಬೇಕು, ನಮಗೆಯಾಕೆ ಬೇಕು ಎಂದು ಕೈಕಟ್ಟಿ ಮೂಕಪ್ರೇಕ್ಷಕರಾಗುವುದೇ ಹೆಚ್ಚು. ಈ ರಾಷ್ಟ್ರದಲ್ಲಿ ಸಂಪೂರ್ಣ ಕ್ರಾಂತಿ ಆಗಬೇಕಾದದ್ದು ಅನಿವಾರ್ಯ. ಇದಕ್ಕೆ ಸೂಕ್ತ ಸಮಯ ಕೂಡಿ ಬರಬೇಕಿದೆ. ಈಗಿನ ಎಲ್ಲಾ ಗೋಸುಂಬೆ ರಾಜಕಾರಣಿಗಳನ್ನು ದೂರವಿಟ್ಟು ಹೊಸ ಅಲೆಗೆ ಬುನಾದಿ ಹಾಕಬೇಕಾಗಿದೆ. ಇಂತಹ ಊಸರವಳ್ಳಿ, ಭ್ರಷ್ಠ ರಾಜಕಾರಣಿಗಳಿಂದ ಸಮಸ್ಸೆಗಳು ಸುಧಾರಿಸುವುದು ಮತ್ತು ನೆಮ್ಮದಿ ಕಾಣುವುದು ದುಃಸಾಧ್ಯ. ಇಷ್ಟಂತು ಸತ್ಯ ಬಡ ರೈತನ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಟಕೀಯವಷ್ಟೆ.
Sing National Anthem
Very good decision !! Madras High Court makes it mandatory to sing National Anthem in all schools including privates ones.
ಬದಲಾವಣೆಗೆ ಸಮಯ ಬೇಕು’
ಬದಲಾವಣೆಗೆ ಸಮಯ ಬೇಕು’
BY ವಿಜಯವಾಣಿ ನ್ಯೂಸ್ · MAR 5, 2016
Oped Ankana 3
ಪ್ರಮುಖ ಸಾಫ್ಟ್ವೇರ್ ಕಂಪನಿ ಇನ್ಪೋಸಿಸ್ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲೊಬ್ಬರು ಟಿ.ವಿ.ಮೋಹನದಾಸ್ ಪೈ. ದೇಶದ ಖ್ಯಾತ ಕಾಪೋರೇಟ್ ಚಿಂತಕರಲ್ಲಿ ಓರ್ವರಾಗಿರುವ ಪೈ, ಸದ್ಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಹಾಗೂ ಉದ್ಯಮಗಳ ಹಲವಾರು ಸಲಹಾ ಸಮಿತಿಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಟಾರ್ಟಪ್ಗಳಲ್ಲಿ ಬಂಡವಾಳ ಹೂಡಿಕೆ ಮೂಲಕ ಯುವ ಜನರ ಬೆನ್ನು ತಟ್ಟುತ್ತಿದ್ದಾರೆ. ಯುವಜನತೆಗೆ ಭವಿಷ್ಯದ ಕುರಿತಂತೆ ಚಿಂತನೆಗೆ ಹಚ್ಚುವ ‘ಪ್ರೇರಣಾ’ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಚೆಗೆ ಮಂಗಳೂರಿಗೆ ಬಂದಿದ್ದ ಪೈ, ಕೇಂದ್ರ ಸರ್ಕಾರದ ಕಾರ್ಯವೈಖರಿ, ಶಿಕ್ಷಣ, ಸ್ಮಾರ್ಟ್ ಸಿಟಿ ಮುಂತಾದ ವಿಷಯಗಳ ಬಗ್ಗೆ ‘ವಿಜಯವಾಣಿ’ಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು.
ಸುರೇಂದ್ರ ವಾಗ್ಳೆ
ಮೋದಿ ಸರ್ಕಾರದ ಬಗ್ಗೆ…
ಮೋದಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನಿ ಉದ್ಯೋಗ ಸೃಷ್ಟಿಯತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸಣ್ಣ ವಿಷಯವನ್ನೂ ದೊಡ್ಡದಾಗಿ ಮಾಡುತ್ತಿವೆ. ಅಸಹಿಷ್ಣುತೆ, ಜೆಎನ್ಯುು ಮುಂತಾದ ಕ್ಷುಲ್ಲಕ ಕಾರಣ ಮುಂದಿಟ್ಟು ಗಲಾಟೆ ಮಾಡುತ್ತಿವೆ. ಈ ಸರ್ಕಾರ ಉತ್ತಮ ಕೆಲಸ ಮಾಡುತ್ತಹೋದರೆ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಭಯ ಅವರಿಗೆ. ಅದಕ್ಕೆ ಈ ಎಲ್ಲ ಗಲಾಟೆ.
ವಿಶ್ವದ ಅರ್ಥಿಕತೆ ಉತ್ತಮ ಮಟ್ಟದಲ್ಲಿಲ್ಲ. ಚೀನಾ ಬೆಳವಣಿಗೆ ಕಡಿಮೆಯಾಗಿದೆ. ಯುರೋಪ್ನಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಅಮೆರಿಕದ ಆರ್ಥಿಕತೆ ನಿಧಾನಗತಿಯಲ್ಲಿದೆ. ತೈಲ ಬೆಲೆ ಇಳಿದಿದೆ. ರಫ್ತು ಉದ್ಯಮದಲ್ಲೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ಉತ್ತಮ ಆರ್ಥಿಕ ಸುಧಾರಣೆ ನಿರ್ಣಯಗಳನ್ನು ಕೈಗೊಂಡಿದೆ. ಆದರೆ ಕಾರ್ಯದ ಫಲಿತಾಂಶ ಬರಲು ಒಂದಷ್ಟು ಸಮಯ ಬೇಕು. ಯಾಕೆಂದರೆ ಹೊರ ದೇಶಗಳ ವಾತಾವರಣ ತೀರಾ ಹದಗೆಟ್ಟಿದೆ. ಹೊಸ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಬ್ಯಾಂಕ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದವರು ವಾಪಸ್ ಮಾಡುತ್ತಿಲ್ಲ, ಬ್ಯಾಡ್ ಲೋನ್ ಪ್ರಮಾಣ ಜಾಸ್ತಿಯಾಗಿದೆ. ಬರದಿಂದಲೂ ಪರಿಸ್ಥಿತಿ ಹದಗೆಟ್ಟಿದೆ. ಬರುವ ಮಾನ್ಸೂನ್ ಉತ್ತಮವಾಗಲಿದೆ ಎನ್ನುವ ನಿರೀಕ್ಷೆ ಇದೆ. ಹಾಗಾಗಿ ಕೃಷಿ ಪರಿಸ್ಥಿತಿ ಸುಧಾರಿಸಿ ಬರಕ್ಕೆ ಬಳಸುವ ಹಣ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ. ಬರುವ ವರ್ಷ ಅಥವಾ ಮುಂದಿನ ಸೆಪ್ಟೆಂಬರ್ ಬಳಿಕ ಒಂದಷ್ಟು ಬದಲಾವಣೆಗಳು ಗೋಚರಿಸಲಿದೆ. ಅದು ಮುಂದಿನ ಮೂರ್ನಾಲ್ಕು ವರ್ಷ ನಂತರ ಮಹತ್ತರ ಬದಲಾವಣೆಗೆ ನಾಂದಿಯಾಗಲಿದೆ. ಆರ್ಥಿಕತೆ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಪ್ರತಿಪಕ್ಷಗಳೂ ಆಕ್ಷೇಪ ತೆಗೆಯುತ್ತಿಲ್ಲ. ಇದನ್ನು ಬಿಟ್ಟು ಜೆಎನ್ಯುು ಮುಂತಾದ ಕ್ಷುಲ್ಲಕ ವಿಷಯಗಳಲ್ಲಿ ಗೌಜಿ ಎಬ್ಬಿಸಲಾಗುತ್ತಿದೆ.
ಮೂಲಸೌಕರ್ಯದಲ್ಲಿ ತಂತ್ರಜ್ಞಾನ ಅಳವಡಿಕೆ
ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆ ಕುರಿತಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಚಿಸಿರುವ ದ ಟೀಮ್ಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇನ್ನು 15-20 ದಿನಗಳಲ್ಲಿ ವರದಿ ಸಲ್ಲಿಸಲಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ದೇಶದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ರಸ್ತೆಗಳಿಗೆ ಮುಂದಿನ 5-10 ವರ್ಷಗಳಲ್ಲಿ 15 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದ್ದರೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು? ಟೋಲ್ ಇಲೆಕ್ಟ್ರಾನಿಕ್ ಸಂಗ್ರಹಣೆಗೆ ಒತ್ತು ನೀಡಬೇಕು, ಅಪಘಾತ ಮುಕ್ತಗೊಳಿಸಬೇಕು ಮುಂತಾದ ಅಂಶಗಳನ್ನು ವರದಿಯಲ್ಲಿ ಸೂಚಿಸಲಿದ್ದೇವೆ. ಮೋದಿ ಸರ್ಕಾರದ ಉತ್ತಮ ಸಚಿವರಲ್ಲಿ ಗಡ್ಕರಿ ಒಬ್ಬರು. ಸುರೇಶ್ ಪ್ರಭು, ಪಿಯೂಷ್ ಗೋಯೆಲ್ ಅವರಂತಹ ಒಳ್ಳೆಯ ಸಚಿವರು ನಮಗೆ ಬೇಕು.
ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ
ಕರಾವಳಿ ಪ್ರವಾಸೋದ್ಯಮ ಕುರಿತಂತೆ ನನ್ನ ಅಧ್ಯಕ್ಷತೆಯಲ್ಲಿ ಟೂರಿಸಂ ವಿಷನ್ ಗ್ರೂಪ್ ವರದಿ ಸಿದ್ಧಪಡಿಸಲಾಗಿದೆ. ಅದನ್ನು ಅನುಸರಿಸಿ ಈಗ ರಾಜ್ಯದ 300 ಕಿ.ಮೀ. ಉದ್ದ ಕರಾವಳಿ ಪ್ರದೇಶ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಳ್ಳುತ್ತಿದೆ. ಜನರು ಮೊದಲು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಬೇಕು.
ಸಿಟಿಯನ್ನು ಸ್ಮಾರ್ಟ್ ಆಗಿಸುವ ಬಗೆ…
ಸ್ಮಾರ್ಟ್ ಸಿಟಿ ಅಂದರೇನೆಂದು ಮೊದಲು ನಮ್ಮ ನಾಯಕರಿಗೆ ತಿಳಿಯಬೇಕು. ಬರೀ ಅಷ್ಟು ಹಣ ಬಂತು, ಇಷ್ಟು ಖರ್ಚು ಮಾಡಿದೆ ಅಂದ್ರೆ ಅರ್ಥ ಇಲ್ಲ. ತಂತ್ರಜ್ಞಾನ ಬಳಸಿಕೊಂಡು ನಗರದಲ್ಲಿ ಸಂಚಾರ ದಟ್ಟಣೆಯನ್ನು ಹೇಗೆ ತಗ್ಗಿಸಬಹುದು? ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಅಗತ್ಯವಾದ ಬಹುಮುಖಿ ಸಂಚಾರಿ ವ್ಯವಸ್ಥೆ ಹೇಗಿರಬೇಕು? ಮೆಟ್ರೋ ಬೇಕಾ, ಖಾಸಗಿ ಸಾರಿಗೆ ಬೇಕಾ? ಮಾಲಿನ್ಯ ತಡೆಗಟ್ಟುವ ರೀತಿ ಯಾವುದು? ಮುಂತಾದ ಸ್ಮಾರ್ಟ್ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಆರೋಗ್ಯ ಸವಲತ್ತುಗಳನ್ನು ನೀಡಲು ಆಂಬ್ಯುಲೆನ್ಸ್ ವ್ಯವಸ್ಥೆ ಸುಧಾರಿಸುವುದು, ಶುದ್ಧ ನೀರು ಸರಬರಾಜು ಮಾಡುವುದು ಇದೆಲ್ಲದರ ಡಾಟಾ ತಯಾರಿಸಬೇಕು. ಇದನ್ನೆಲ್ಲ ಮಾಡಿದರೆ ಜನರ ಉತ್ಪಾದಕತೆ ಹೆಚ್ಚಾಗುತ್ತದೆ, ಸಮಯ ಉಳಿಯುತ್ತದೆ. ಎಲ್ಲವನ್ನೂ ಸರಿಯಾಗಿ ಪ್ಲಾನ್ ಮಾಡಿ ಸರ್ಕಾರಕ್ಕೆ ಸಲ್ಲಿಸಿದರೆ ಖಂಡಿತವಾಗಿ ಒಪ್ಪಿಗೆ ಸಿಗುತ್ತದೆ.
ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕುರಿತಂತೆ ಪರಿಣತಿ ಇರುವವರು ಕಡಿಮೆ. ಬೆಂಗಳೂರಿನ ಆರ್.ಕೆ.ಮಿಶ್ರಾ ಅವರು ಟೋಕಿಯೋವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಿದ ತಂಡದಲ್ಲಿದ್ದ ವ್ಯಕ್ತಿ. ಅಂಥವರನ್ನು ಬಳಸಿಕೊಂಡು ಯೋಜನೆ ರೂಪಿಸಿದರೆ ಒಳ್ಳೆಯದು. ಜಗತ್ತಿನ ಬಹುತೇಕ ಎಲ್ಲ ಪ್ರಮುಖ ನಗರಗಳಿಗೂ ಅಭಿವೃದ್ಧಿ ಪ್ಲಾನ್ ಇರುತ್ತದೆ. ಸಿಂಗಾಪುರದ ನಿದರ್ಶನ ತೆಗೆದುಕೊಂಡರೆ, ಅಲ್ಲಿ 30 ವರ್ಷದ ಪ್ಲಾನ್ ಇದೆ. ಮುಂದಿನ 5, 10 ವರ್ಷಗಳಲ್ಲಿ ನಗರ ಎಷ್ಟು ಬೆಳೆಯಬಹುದು ಎನ್ನುವುದನ್ನು ಮೊದಲೇ ಅಂದಾಜು ಮಾಡುತ್ತಾರೆ, ಅದಕ್ಕೆ ಸರಿಯಾಗಿ ಬಂಡವಾಳ ಹೂಡುತ್ತಾರೆ. ನಮ್ಮಲ್ಲಿ ಅದನ್ನೆಲ್ಲ ಯೋಚಿಸುವ ಸಾಮರ್ಥ್ಯ ಬೇಕಲ್ಲ… ಇದರಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಮುಖ್ಯ.
ಶಿಕ್ಷಣದಲ್ಲಿ ಜಾತಿ ಬೇಡ…
ಶಿಕ್ಷಣದಲ್ಲಿ ಜಾತಿಗಳನ್ನು ತಂದು ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಶಿಕ್ಷಣ ಗುಣಮಟ್ಟ ಹೆಚ್ಚಿಸಬೇಕಾದರೆ ಒಂದೇ ದಾರಿ, ಎಲ್ಲರೂ ಹಣ ಕೊಟ್ಟು ಪ್ರವೇಶ ಪಡೆಯಬೇಕು. ಬಡವರಿಗೆ ಸ್ಕಾಲರ್ಷಿಪ್ ಕೊಡಲಿ. ಮುಂದೆ ಒಳ್ಳೆಯ ಮಾರ್ಕ್ಸ್ ಬಂದರೆ ಮಾತ್ರ
ಸ್ಕಾಲರ್ಷಿಪ್ ಮುಂದುವರಿಸಬೇಕು. ಹಾಗೆ ಮಾಡಿದರೆ ಮಾತ್ರ ಮಕ್ಕಳು ಓದುತ್ತಾರೆ. ಅದನ್ನು ಬಿಟ್ಟು ‘ನಿನಗೆ ಎಲ್ಲವನ್ನೂ ಕೊಡುತ್ತೇವೆ. ಮೀಸಲಾತಿ ಕೊಡುತ್ತೇವೆ. ಉಚಿತ ಶಿಕ್ಷಣ ನೀಡುತ್ತೇವೆ’ ಅಂದ್ರೆ ಅದಕ್ಕೆ ಕೇಳುವವರಿಲ್ಲ-ಮಾಡುವವರಿಲ್ಲ ಎಂದಾಗುತ್ತದೆ. ಜೆಎನ್ಯುುನ ಒಬ್ಬ ವಿದ್ಯಾರ್ಥಿ ಪದವಿ ಪಡೆಯಲು ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಪ್ರಾಧ್ಯಾಪಕರು ಸರಿಯಾಗಿ ಪಾಠ ಮಾಡುವುದಿಲ್ಲ. ಬರೀ ಇಂತಹ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಅವರು ಖರ್ಚು ಮಾಡುವುದು ನಮ್ಮಂತಹವರ ತೆರಿಗೆ ಹಣ. ವ್ಯವಸ್ಥೆ ಕೆಡುವುದು ಇಲ್ಲೇ. ಇದನ್ನು ಬದಲಾಯಿಸಬೇಕಾದರೆ ಜನರು ಒಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು.
http://vijayavani.net/?p=1742291
Friday, March 4, 2016
Tables have turned!
Tables have turned! Here's a 5th std student talking to all the adults of Shantinagar RWA about waste segregation and composting!!
ಸದನದಲ್ಲಿನ ಪ್ರಧಾನಿ ಮೋದಿಜಿ ಮಾಡಿದ ಭಾಷಣದ ಕೆಲ ಅಂಶಗಳು. (3-3-16)
...ಸದನದಲ್ಲಿನ ಪ್ರಧಾನಿ ಮೋದಿಜಿ ಮಾಡಿದ ಭಾಷಣದ ಕೆಲ ಅಂಶಗಳು. (3-3-16)
★ ನನಗೆ 20 ತಿಂಗಳಲ್ಲಿ 4 ಲಕ್ಷ ಶೌಚಾಲಯ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದಗಳು.
★ 18 ಸಾವಿರ ಹಳ್ಳಿಗಳಿಗೆ ಕರೆಂಟ್ ಇದುವರೆಗೂ ಮುಟ್ಟಿಲ್ಲ, ಆದರೆ ಈಗ ನಾವು ತಲುಪಿಸಲು ಯೋಜನೆ ರೂಪಿಸಿಕೊಂಡು ಪ್ರತಿದಿನ. ಈ ಬಗ್ಗೆ ಪ್ರಗತಿ ಹೊಂದುತ್ತಿದ್ದೇವೆ ಇದಕ್ಕಾಗಿ ಕಾಂಗ್ರೆಸ್ ಗೆ ಧನ್ಯವಾದಗಳು .
★ UPA -1 ರಲ್ಲಿ ನಿರ್ಮಿಸಿದ ರೈಲ್ವೆ ಹಳಿಗಳ ಉದ್ದ 1,477 KM, UPA-2 ರಲ್ಲಿ 1520KM ಆದರೆ NDA ಕೇವಲ ಎರಡು ವರ್ಷದ ಅಂತರದಲ್ಲಿ ನಿರ್ಮಿಸಿದ ರೈಲ್ವೇ ಹಳಿಗಳ ಉದ್ದ 2292KM .
ಇಲ್ಲಿ ಅದೇ ಇಲಾಖೆ, ಅದೇ ಜನಗಳು ಆದರೆ ಕಾರ್ಯ ಶೈಲಿ ಬದಲಾಗಿದೆ ಅದು ಹೇಗಾಯಿತು ನೀವು ಯೋಚಿಸಿ.
★ ಕೇಂದ್ರದಿಂದ ರಾಜ್ಯಕ್ಕೆ
2014ರ ಸಾಲಿನಲ್ಲಿ ನೀಡಲಾದ ಅನುದಾನ 6,78,892 ಕೋಟಿ.
2015ರ ಸಾಲಿನಲ್ಲಿ ನೀಡಲಾದ ಅನುದಾನ
8,20,133 ಕೋಟಿ
ಅಂದರೆ ರಾಜ್ಯಕ್ಕೆ ಕೇಂದ್ರದಿಂದ 1,41,314 ಅಂದರೆ 20% ಅನುದಾನ ಹೆಚ್ಚುವರಿಯಾಗಿ ಬಂದಿದೆ.
★ ಅನೇಕ ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಬಾಂಗ್ಲಾ ಗಡಿಯ ಅನೇಕ ಹಳ್ಳಿಗಳು ಕತ್ತಲೆಯಲ್ಲಿದ್ದವು ಅವುಗಳಿಗೆ ಮುಕ್ತಿ ದೊರಕಿಸಿ ಅಭಿವೃದ್ಧಿ ಮಾಡಲು ಪ್ರಾರಂಭಿಸಿದ್ದು ಇದೇ ಮೋದಿ ಸರಕಾರ.
★ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಸಫಲತೆಗೆ ,ಕಾಂಗ್ರೆಸ್ ಬಡವರನ್ನು ಬಡವರಾಗಿಯೇ ಇಟ್ಟು ಆ ಯೋಜನೆ ತಲುಪಿಸಿರಲಿಲ್ಲ ,ಈಗ ನಾವು ತಲುಪಿಸುತ್ತಿದ್ದೇವೆ.ಇದೇ ಕಾರಣ.
★ಆಹಾರ ಭದ್ರತೆ ಯೋಜನೆ ನಿಮ್ಮ ಕೊಡುಗೆ ಅಂತೀರಿ ಆದರೆ ಕಾಂಗ್ರೆಸ್ ಆಢಳಿತದ ಕೇರಳ,ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ ಕ್ಕೆ ಯೋಜನೆ ಇನ್ನೂ ಯಾಕೆ ತಲುಪಿಲ್ಲ?
★ಎಲ್ಲವೂ ನಿಮ್ಮ (ಕಾಂಗ್ರೆಸ್)ಯೋಜನೆ ಅಂತೀರಿ?ಆದರೆ GST BILL, ಜಲ ಸಾಮರ್ಥ್ಯ ವಿನಿಯೋಗ ಯೋಜನೆಗಳನ್ನು ಏಕೆ ತಡೆ ಹಿಡಿದಿದ್ದೀರಿ? ನಾವು ರಾಜ್ಯಸಭೆಯಲ್ಲಿ ಕಡಿಮೆ ಸ್ಥಾನ ಹೊಂದಿರುವುದನ್ನು ನೀವು ಈ ರೀತಿ ಯೋಜನೆಗಳ ತಡೆಯುವಿಕೆಗೆ ಉಪಯೋಗಿಸುವ ಬದಲು ದೇಶದ ಪ್ರಗತಿ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಲು ಸಹಕರಿಸಿ ಆಮೇಲೆ ಬೇಕಾದ್ರೆ ಅದರ ಕ್ರೆಡಿಟ್ ತಗೊಳಿ.
★ ಪ್ರಧಾನ್ ಮಂತ್ರಿ ಫಸಲ್ ಭೀಮ್ ಯೋಜನೆ ಜೊತೆಗೆ ಈಗಾಗಲೇ ಇರುವ ಅನೇಕ ವಿಮಾ ಯೋಜನೆಗಳಾದ ಸುರಕ್ಷಾ ಯೋಜನೆ, ಚಾತ್ರ ಯೋಜನೆ, ಮೋಟಾರು ವಿಮಾ ಯೋಜನೆ, ಕೃಷಿ ಪಂಪ್ ವಿಮಾ ಯೋಜನೆ, ಟ್ರ್ಯಾಕ್ಟರ್ ವಿಮಾ, ಜೀವನದ ಜ್ಯೋತಿ , ದುರ್ಘಟನಾ ವಿಮಾ ಯೋಜನೆಯಂಥ ಏಳು ಯೋಜನೆಗಳಲ್ಲಿ ತಾಳೆ ಮಾಡಿ ಯಾವುದಾದರೂ ಎರಡನ್ನು ಜೋಡಿಸಿ ಅತ್ಯಂತ ಕಡಿಮೆ ಪ್ರೀಮಿಯಂಗೆ ರೈತನಿಗೆ ದೊರಕುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಆಧ್ದರಿಂದ ಏಪ್ರಿಲ್ 1ರಿಂದ ದೇಶದ ಎಲ್ಲ ರೈತರಿಗೆ ಈ ಯೋಜನೆ ದೊರಕುತ್ತದೆ.
★ ನೀವು(ಕಾಂಗ್ರೆಸ್) ಮಾಡಲಾಗದ್ದನ್ನು ನಾವು ಮಾಡಬಾರದು ಆದ್ದರಿಂದಲೇ ನಮ್ಮ ಕಾಲೆಳೆಯುತ್ತೀರಿ. ಇದು ನಮಗೆ ಗೊತ್ತಿದೆ
★ ರಾಹುಲನ ನೆನ್ನೆಯ ಕಾಮಿಡಿ ಭಾಷಣವನ್ನು ಅಣಕಿಸಿ, ಸದನದಲ್ಲಿ ವಿಪಕ್ಷ ಸ್ಥಾನದ ಗೌರವ ಉಳಿಸಿಕೊಳ್ಳಲು ಮನವಿಯಿತ್ತರು.
ಸರಿಯಾಗಿ ತಮ್ಮ ಮನೆಯನ್ನು ನೋಡಲಾಗದ ಕಾಂಜೀಪೀಂಜಿಗಳು ದೇಶದ ಪ್ರಧಾನಮಂತ್ರಿಯನ್ನು ಫೇಕು ಅನ್ನುವ ಮೂರ್ಖರೇ ತಿಳಿದುಕೊಳ್ಳಿ .ನಾವು ಮೋದಿ ಭಕ್ತರಲ್ಲ ,ದೇಶಭಕ್ತರು. ನಿಮ್ಮ ಭಕ್ತಿ ಏನೆಂಬುದು ಮೊನ್ನೆ ಸಿದ್ದರಾಮಯ್ಯರ ವಾಚ್ ಬಗ್ಗೆ ಸಮರ್ಥನೆ ನೀಡಿದಾಗಲೇ ಗೊತ್ತಾಗಿದೆ. ತಾಕತ್ತಿದ್ದರೆ ಮೋದಿ ಕೊಟ್ಟ ಅಂಕಿ ಅಂಶಗಳಂತೆ ಸಿದ್ದರಾಮಯ್ಯ ಕೊಟ್ಟು ತೋರಿಸಲಿ.
- ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ.