Thursday, March 3, 2016

60 ರೂಪಾಯಿಗೆ ಸಿಗುತ್ತೆ ಫ್ಯಾನ್

60 ರೂಪಾಯಿಗೆ ಸಿಗುತ್ತೆ ಫ್ಯಾನ್

by ವಿಜಯವಾಣಿ ನ್ಯೂಸ್ · Mar 4, 2016
National 10

ನವದೆಹಲಿ: ವಿದ್ಯುತ್ ಉಳಿತಾಯದ ಉದ್ದೇಶದಿಂದ ಎಲ್​ಇಡಿ ಬಲ್ಬ್ ವಿತರಣೆ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಇದೀಗ ಫ್ಯಾನ್ ಮತ್ತು ಎಸಿಯನ್ನು ಕಡಿಮೆ ದರದಲ್ಲಿ ವಿತರಿಸಲು ನಿರ್ಧರಿಸಿದೆ. ಇದೇ ಏಪ್ರಿಲ್​ನಿಂದ ಫ್ಯಾನ್ ವಿತರಣೆ ಆರಂಭವಾಗಲಿದ್ದು, ಜನರು 60 ರೂಪಾಯಿಗೆ ಫ್ಯಾನ್ ಖರೀದಿಸಬಹುದಾಗಿದೆ. ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಬಳಕೆಯಲ್ಲಿರುವ ಫ್ಯಾನ್​ಗಳಿಗಿಂತ ಶೇ. 35ರಷ್ಟು ಕಡಿಮೆ ವಿದ್ಯುತ್ ಬಳಸುವ ಫ್ಯಾನ್​ಗಳನ್ನು ವಿತರಿಸಲಾಗುವುದು. 3ರಿಂದ 4 ಕೋಟಿ ಫ್ಯಾನ್​ಗಳನ್ನು ವಿತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಎನರ್ಜಿ ಎಫಿಶಿಯೆನ್ಸಿ ಸರ್ವಿಸ್(ಇಇಎಸ್​ಎಲ್) ಇದರ ನಿರ್ವಹಣೆಯನ್ನು ಮಾಡಲಿದೆ.

ಕಂತುಗಳಲ್ಲಿ ಪಾವತಿ: 1800 ರಿಂದ 1900 ರೂ. ಬೆಲೆಯ ಫ್ಯಾನ್​ಗಳನ್ನು ಸರ್ಕಾರ 950 ರೂ.ಗೆ ಖರೀದಿಸಲಿದ್ದು, ಇವುಗಳನ್ನು ಜನತೆಗೆ 60 ರೂಪಾಯಿಗೆ ನೀಡಲಿದೆ. ಉಳಿದ ಮೊತ್ತವನ್ನು ಭರಿಸಲು ಜನರಿಗೆ ಎರಡು ವರ್ಷಗಳ ಅವಕಾಶ ನೀಡಿದ್ದು, ಈ ಅವಧಿಯಲ್ಲಿ ಅವರು ಕಂತುಗಳಲ್ಲಿ ಭರಿಸಬಹುದಾಗಿದೆ. ಮಧ್ಯಮ ವರ್ಗಗಳಲ್ಲಿ ಬಲ್ಬ್ ಮತ್ತು ಫ್ಯಾನ್​ಗಾಗಿಯೇ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಹೀಗಾಗಿ 5 ಸ್ಟಾರ್​ಗಳ ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್​ನಲ್ಲಿ ತಿಂಗಳಿಗೆ 70-80 ರೂ. ಉಳಿತಾಯವಾಗಲಿದೆ.

ಹೊಸ ಎಸಿ ಸಿಗಬೇಕೆಂದ್ರೆ ಹಳೇ ಎಸಿ ತೆಗೀಬೇಕು!: ಸರ್ಕಾರ ವಿದ್ಯುತ್ ಉಳಿತಾಯ ಮಾಡುವಂತಹ ಎಸಿ ಹಂಚಿಕೆಗೂ ಯೋಜನೆ ಸಿದ್ಧಪಡಿಸಿದೆ. ಆದರೆ ಹೊಸ ಎಸಿ ಅಳವಡಿಸಬೇಕೆಂದರೆ ಹೆಚ್ಚು ವಿದ್ಯುತ್ ಬಳಸುವ ಹಳೆಯ ಎಸಿಯನ್ನು ತೆಗೆಯಬೇಕು. ಜತೆಗೆ ಇನ್ಯಾವುದೋ ಕೋಣೆಯಲ್ಲಿ ಬಳಸಬಾರದು. ಈ ಉದ್ದೇಶದಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ಪಿಯೂಷ್ ಹೇಳಿದ್ದಾರೆ.

ಆಂಧ್ರದಿಂದ ಆರಂಭ

ಏಪ್ರಿಲ್ ಮೊದಲ ವಾರದಿಂದಲೇ ಫ್ಯಾನ್ ಹಂಚಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆಂಧ್ರದಿಂದ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿದೆ. ನಂತರದ ಹಂತಗಳಲ್ಲಿ ದೆಹಲಿ, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ಫ್ಯಾನ್ ವಿತರಣೆ ನಡೆಯಲಿದೆ.
http://vijayavani.net/?p=1741922

No comments:

Post a Comment