Friday, February 19, 2016

ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು

ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು
Thu, Feb 18, 2016, 17:14 [IST]
Comments (0)

ಹಿಂದೂ ಧರ್ಮವು ತನ್ನದೇ ಆದ ಆಚರಣೆಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ನಿತ್ಯ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕೆಲವೊಂದು ನೀತಿ ನಿಯಮಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಕೆಲವೊಮ್ಮೆ ಈ ನಂಬಿಕೆಗಳ ಗೂಡಾರ್ಥವನ್ನು ನಾವು ಅರಿತುಕೊಳ್ಳದೆಯೇ ಅದನ್ನು ನಾವು ಅನುಸರಿಸುತ್ತೇವೆ. ಆದರೆ ಈ ಆಚರಣೆಗಳು ನಂಬಿಕೆಗಳು ಏಕೆ ಮಹತ್ವವನ್ನು ಪಡೆದುಕೊಂಡಿವೆ ಮತ್ತು ಮೂಢ ನಂಬಿಕೆಯಾಗಿದ್ದರೂ ಅವುಗಳ ಅನುಸರಣೆ ಏಕೆ ಮಾಡಬೇಕು ಎಂಬುದು ನಿಮ್ಮನ್ನು ಕಾಡಿರಬಹುದು. ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!

ವೈಜ್ಞಾನಿಕವಾದ ರಹಸ್ಯಗಳನ್ನು ಈ ನಂಬಿಕೆಗಳು ಹೊಂದಿಕೊಂಡಿದ್ದು ಅವುಗಳನ್ನು ಪಾಲಿಸುವುದು ಆರೋಗ್ಯಕರವಾಗಿ ಉತ್ತಮವಾಗಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ. ಯಾವುದೇ ನಂಬಿಕೆಗಳು ಸತ್ಯಕ್ಕೆ ಸಮೀಪವಾಗಿರುತ್ತವೆ ಅಂತೆಯೇ ಅದೊಂದು ಉತ್ತಮ ಸಿದ್ಧಾಂತವನ್ನು ಹೊಂದಿಕೊಂಡಿರುತ್ತದೆ. ಈ ಆಚರಣೆಗಳನ್ನು ನಂಬಿಕೆಗೆ ಹತ್ತಿರವಾಗಿ ಆಚರಿಸಿ ಅದರಲ್ಲಿರುವ ಕುರುಡತನವನ್ನು ನಂಬದೆ ಆ ಸಿದ್ಧಾಂತಗಳನ್ನು ಅರಿತುಕೊಂಡು ಪಾಲನೆ ಮಾಡುವುದು ಉತ್ತಮವಾದುದು. ಇಂದಿನ ಲೇಖನದಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಗಳು ಮತ್ತು ಅವುಗಳಲ್ಲಿ ಅಡಗಿರುವ ವೈಜ್ಞಾನಿಕ ಸಿದ್ಧಾಂತಗಳನ್ನು ಅರಿತುಕೊಳ್ಳೋಣ...
http://kannada.boldsky.com/inspiration/short-story/list-crazy-superstitious-beliefs-india.html

posted from Bloggeroid

No comments:

Post a Comment