
http://vijayavani.net/?p=1733876
ಆಂಜನೇಯನಿಗೆ ‘ರಾಕ್ಷಸ’ ಪಟ್ಟಕಟ್ಟಿದ ಕೇಜ್ರಿವಾಲ್, ದೇಶವ್ಯಾಪಿ ಟೀಕೆ
BY ವಿಜಯವಾಣಿ ನ್ಯೂಸ್ · FEB 16, 2016
kejrivai web
ನವದೆಹಲಿ: ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಅಬ್ಬರದಲ್ಲಿ, ದೈವ ಸ್ವರೂಪಿ ಆಂಜನೇಯನಿಗೆ ರಾಕ್ಷಸಪಟ್ಟಕಟ್ಟಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕೇಜ್ರಿವಾಲ್ ಮಂಗಳವಾರ ರೇಖಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆ ನಿಂತ್ತಿದ್ದು, ಸುತ್ತಲು ಬೆಂಕಿಯ ಜ್ವಾಲೆ ಪ್ರಜ್ವಲಿಸುತ್ತಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮಲು ಆತ್ಮಹತ್ಯೆ ಪ್ರಕರಣ, ಪಠಾಣ ಕೋಟ್ ಭಯೋತ್ಪಾದಕ ದಾಳಿ ಹಾಗೂ ಇದೀಗ ಜೆಎನ್ಯುು ಗಲಾಟೆಗೆ ತನ್ನ ಬಾಲದಿಂದ ಬೆಂಕಿ ಹಚ್ಚಿಬಂದಿರುವೆ ಎಂದು ಆಂಜನೇಯ ಅವತಾರಿ ಪ್ರಧಾನಿಗೆ ವಿವರ ಒಪ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.
ಕೇಜ್ರಿವಾಲ್ ಟ್ವೀಟ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಬಲಪಂಥಿಯರು ಆಂಜನೇಯನಿಗೆ ಮಾಡಿದ ಅವಮಾನವನ್ನು ಖಂಡಿಸಿ ಪ್ರತಿಭಟಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.
posted from Bloggeroid
No comments:
Post a Comment