ರೋಗ ರುಜಿನಗಳ ಹೆಡೆಮುರಿ ಕಟ್ಟಿಹಾಕುವ ಅಜ್ಜಿ ಮಾಡಿದ ಮನೆಮದ್ದು!
Posted by: Manohar
| Thu, Feb 12, 2015, 23:10 [IST]
Comments (0)
ಅಜ್ಜಿಯು ಬಳಸುತ್ತಿದ್ದ ಮನೆಮದ್ದುಗಳ ಕುರಿತು ನಿಮಗೇನಾದರೂ ತಿಳಿದಿದೆಯೇ? ಇ೦ದಿನ ದಿನಮಾನಗಳಲ್ಲಿ ನಮ್ಮಲ್ಲಿ ಯಾರೇ ಆಗಲಿ, ಕೊ೦ಚ ಅಸ್ವಸ್ಥಗೊ೦ಡಲ್ಲಿ ನಾವು ಮಾಡುವ ಮೊದಲ ಕೆಲಸವೇನೆ೦ದರೆ ವೈದ್ಯರಿಗೆ ಕರೆ ಮಾಡುವುದು ಇಲ್ಲವೇ ಸಮೀಪದ ದವಾಖಾನೆಗೆ ದೌಡಾಯಿಸುವುದು. ಇನ್ನೂ ಕೆಲವರು ಮತ್ತೂ ಒ೦ದು ಹೆಜ್ಜೆ ಮು೦ದುವರಿದು ವೈದ್ಯರ ಶಿಫಾರಸಿನ ಹ೦ಗಿಲ್ಲದೇ ಔಷಧಾಲಯದವರು ನೀಡುವ ಗುಳಿಗೆಗಳ ಬಳಕೆಗೆ ಮು೦ದಾಗುತ್ತಾರೆ. ಆದರೆ, ಇನ್ನೂ ಕೆಲವರು ಬುದ್ಧಿವ೦ತರಿರುತ್ತಾರೆ. ಇವರು ಮೊದಲು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು
ಅ೦ತಹ ಅನೇಕ ನೈಸರ್ಗಿಕ ಪರಿಹಾರೋಪಾಯಗಳು ತಲೆಮಾರಿನಿ೦ದ ತಲೆಮಾರಿಗೆ ಸಾಗುತ್ತಾ ಬ೦ದಿದ್ದು, ಈ ತೆರನಾಗಿ ಪಾರ೦ಪರಿಕವಾಗಿ ಅವು ನಮ್ಮ ತಲೆಮಾರನ್ನು ತಲುಪಿವೆ. ಅಜ್ಜಿಯ ಈ ಮನೆಮದ್ದುಗಳು ಮನೆಯಲ್ಲಿಯೇ ಸುಲಭವಾಗಿ ಕೈಗೆಟಕುವ೦ತಹ ನೈಸರ್ಗಿಕ ಘಟಕಗಳನ್ನು ಬಳಸಿಕೊ೦ಡವುಗಳಾಗಿರುತ್ತವೆ. ಕೆಲವೊಮ್ಮೆ ಅವು ಚೆನ್ನಾಗಿ ಕೆಲಸಮಾಡಬಲ್ಲವು ಅಥವಾ ಕೆಲವೊಮ್ಮೆ ಕೆಲವರ ವಿಷಯದಲ್ಲಿ ಅವು ಕೆಲಸವನ್ನು ಮಾಡದೆಯೂ ಇರಬಹುದು.
ಒ೦ದು ವೇಳೆ ಅವು ಚೆನ್ನಾಗಿ ಕೆಲಸ ಮಾಡಿದವೆ೦ದಾದರೂ ಕೂಡ ಅವು ಸೂಕ್ತ ಚಿಕಿತ್ಸೆಗೆ ಪರ್ಯಾಯವಲ್ಲವೆ೦ಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಅತ್ಯವಶ್ಯವಾಗಿದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊ೦ದು ಸ೦ಗತಿಯೇನೆ೦ದರೆ, ಈ ಮನೆಮದ್ದುಗಳನ್ನು ಕೇವಲ ಸಣ್ಣಪುಟ್ಟ ಅನಾರೋಗ್ಯಗಳ ಸಮಸ್ಯೆಗಳಿಗೆ ಮಾತ್ರವೇ ಬಳಸಬಹುದು. ಗ೦ಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ವೈದ್ಯರನ್ನು ಕಾಣುವುದು ಉತ್ತಮ ಹಾಗೂ ಚಿಕಿತ್ಸೆಯ ನಿಯಮಿತವಾದ ಪ್ರಕ್ರಿಯೆಯನ್ನು ಅನುಸರಿಸುವುದು ಸೂಕ್ತ. ಈ ಲೇಖನದಲ್ಲಿ, ನಾವೀಗ ಕೆಲವು ಸರಳವಾದ ಅಜ್ಜಿಯ ಮನೆಮದ್ದುಗಳ ಕುರಿತು ಚರ್ಚಿಸೋಣ.
http://kannada.boldsky.com/health/wellness/2015/12-grandma-s-home-remedies-009270.html

posted from Bloggeroid
No comments:
Post a Comment