ಶ್ರೀ ರಾಮಕೃಷ್ಣ ಪರಮಹಂಸ ವಚನಗಳು

ಶ್ರೀ ರಾಮಕೃಷ್ಣ ಪರಮಹಂಸರ ಜನುಮದಿನದ ಶುಭಾಶಯಗಳು.
ಶ್ರೀ ರಾಮಕೃಷ್ಣ ಪರಮಹಂಸ ವಚನಗಳು
ಅಧ್ಯಾತ್ಮ ವಿಷಯಕ್ಕೆ ಬಂದರೆ ಅತ್ಯಂತ ಕ್ಲಿಷ್ಟ ಎನ್ನಿಸುವ ಸಂಗತಿಯನ್ನೂ ಬಹಳ ಸರಳವಾಗಿ ವಿವರಿಸುವುದರಲ್ಲಿ ಶ್ರೀ ರಾಮಕೃಷ್ಣರನ್ನು ಮೀರಿಸುವವರು ಯಾರಾದರೂ ಇದ್ದಾರೆಯೆ? ಗೊತ್ತಿಲ್ಲ. ಇಲ್ಲಿ ಎರಡು ಉದಾಹರಣೆಗಳಿವೆ-
೧.’ಒಮ್ಮೆ ಒಂದು ಉಪ್ಪಿನ ಬೊಂಬೆ ಸಮುದ್ರದ ಆಳ ತಿಳಿಯಲು ಬಯಸಿತಂತೆ. ಆದರೆ ಉಪ್ಪಿನ ಬೊಂಬೆ ಒಂದು ಹೆಜ್ಜೆಯನ್ನು ಸಮುದ್ರದಲ್ಲಿ ಇಟ್ಟ ಕ್ಷಣವೇ ಅದು ಕರಗಿ ಹೋಯ್ತಂತೆ“. ಮನುಷ್ಯ ದೇವರನ್ನು ಅರಿಯಲು ಹೊರಟಾಗ ಅವನಲ್ಲಿ ಅಂತರ‍್ಗತವಾಗಿರುವ ಮಿತಿಗಳಿಂದಾಗಿಯೇ ಅವನಿಗೆ ಹೆಚ್ಚೇನೂ ಸಾಧಿಸಲಿಕ್ಕಾಗುವುದಿಲ್ಲ ಎಂದು ಮನದಟ್ಟು ಮಾಡಲು ಇದನ್ನು ಹೇಳುತ್ತಾರೆ.
೨.
’ಅಜ್ನಾನ ಒಂದು ಮುಳ್ಳು; ಆ ಮುಳ್ಳನ್ನು ಜ್ನಾನ ಎಂಬ ಇನ್ನೊಂದು ಮುಳ್ಳಿನಿಂದ ತೆಗೆಯಬೇಕು’ ಎಂದು ಹೇಳಿ, ಮುಂದುವರಿದು” ಒಂದು ಸರ್ತಿ ಅಜ್ನಾನ ಎಂಬ ಮುಳ್ಳು ಹೋಯ್ತು ಎಂದರೆ ಎರಡೂ ಮುಳ್ಳುಗಳು ನಿರುಪಯುಕ್ತ, ಅವುಗಳನ್ನು ಎಸೆದು ಬಿಡಿ’ ಎನ್ನುತ್ತಾರೆ.ಮೇಲ್ನೋಟಕ್ಕೆ ಅತಿ ಸರಳ ಎಂದನ್ನಿಸುವ ಈ ಹೇಳಿಕೆಯ ಬಗ್ಗೆ ಯೋಚಿಸಿದಷ್ಟೂ ಹೊಸ ಅರ್ಥ ಹೊಳೆಯುತ್ತದೆ.

posted from Bloggeroid
No comments:
Post a Comment