Tuesday, February 23, 2016

ಭಾರತವೇ ಸಾಯುತ್ತಿದೆ, ನಾವು ಬದುಕ್ಕಿದ್ದೇನು ಪ್ರಯೋಜನ.! ಬ್ಲಾಗ್'ನಲ್ಲಿ ನಟ ಮೋಹನ್ ಲಾಲ್ ವ್ಯಥೆ

ಭಾರತವೇ ಸಾಯುತ್ತಿದೆ, ನಾವು ಬದುಕ್ಕಿದ್ದೇನು ಪ್ರಯೋಜನ.! ಬ್ಲಾಗ್'ನಲ್ಲಿ ನಟ ಮೋಹನ್ ಲಾಲ್ ವ್ಯಥೆ
Suvarnanews: 1 day ago
ಭಾರತವೇ ಸಾಯುತ್ತಿದೆ, ನಾವು ಬದುಕ್ಕಿದ್ದೇನು ಪ್ರಯೋಜನ.! ಬ್ಲಾಗ್'ನಲ್ಲಿ ನಟ ಮೋಹನ್ ಲಾಲ್ ವ್ಯಥೆ

ತಿರುವನಂತಪುರಂ(ಫೆ. 22): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಲಯಾಳಂ ಸೂಪರ್'ಸ್ಟಾರ್ ಮೋಹನ್ ಲಾಲ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು, ಭಾರತ ವಿರೋಧಿ ಘೋಷಣೆ ಕೂಗುತ್ತಿರುವವರ ವಿರುದ್ಧ ಧ್ವನಿ ಎತ್ತಿದ್ದಾರೆ. ದೇಶಕ್ಕಾಗಿ ಸೈನಿಕರು ಬಲಿದಾನಗೈಯ್ಯುತ್ತಿದ್ದರೆ, ಕೆಲ ಲಜ್ಜೆಗೆಟ್ಟ ಜನರು ಮನೆಯಲ್ಲಿ ಕೂತು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ ಎಂದು ಮೋಹನ್ ಲಾಲ್ ತಮ್ಮ ಬ್ಲಾಗ್'ನಲ್ಲಿ ಕಠಿಣ ಪದಗಳಲ್ಲಿ ಬರೆದಿದ್ದಾರೆ.

"ಭಾರತವೇ ಸಾಯುತ್ತಿರುವಾಗ ನಾವು ಬದುಕಿದ್ದೇನು ಪ್ರಯೋಜನ" ಎಂದು ಶೀರ್ಷಿಕೆಯಡಿ ಲೇಖನ ಬರೆದಿರುವ ಮೋಹನ್ ಲಾಲ್, ಇತ್ತೀಚೆಗೆ ಕನ್ನಡಿಗ ಹನುಮಂತಪ್ಪ ನಾಯ್ಕ್ ಸೇರಿದಂತೆ 9 ಯೋಧರು ಹಿಮಪಾತಕ್ಕೆ ಬಲಿಯಾದ ಘಟನೆಯನ್ನು ಮೆಲುಕಿ ಹಾಕಿದ್ದಾರೆ.

"ಸ್ವಲ್ಪ ಚಳಿ ಬಂದರೆ ಕಂಬಳಿ ಹೊದ್ದುಕೊಂಡು ಮಲಗುತ್ತೇವೆ. ಹಲ್ಲುಜ್ಜಲು, ಸ್ನಾನ ಮಾಡಲು ನಮಗೆ ಬಿಸಿ ನೀರು ಬೇಕು. ಇಷ್ಟು ಸುಖ ಸೌಲಭ್ಯಗಳನ್ನು ಪಡೆದು ವಿಶ್ವವಿದ್ಯಾಲಯ, ಕಚೇರಿಗಳಿಗೆ ಹೋಗಿ ನಮ್ಮ ಯೋಧರ ಬಗ್ಗೆ ಚರ್ಚೆ ಮಾಡುತ್ತೇವೆ, ಅವರನ್ನು ಪ್ರಶ್ನಿಸುತ್ತೇವೆ, ನಿಂದಿಸುತ್ತೇವೆ... ನಿಂತುಕೊಳ್ಳಲು ಈ ನೆಲ ಬೇಕು, ಉಸಿರಾಡಲು ಇಲ್ಲಿಯ ಗಾಳಿ ಬೇಕು, ಕುಡಿಯಲು ಇಲ್ಲಿಯ ನೀರು ಬೇಕು... ಸತ್ತ ಮೇಲೆ ಹೂಳಲು ಇಲ್ಲಿಯ ಮಣ್ಣು ಬೇಕು.." ಎಂದು ಮೋಹನ್ ಲಾಲ್ ಮಾರ್ಮಿಕವಾಗಿ ಹೇಳಿದ್ದಾರೆ.

ರಾಷ್ಟ್ರ ಮತ್ತು ಸ್ವಾತಂತ್ರ್ಯದ ನೈಜ ಅರ್ಥವನ್ನು ಪೋಷಕರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಸ್ವಾತಂತ್ರ್ಯವನ್ನು ಗೌರವಿಸುವುದು ಎಷ್ಟು ಮುಖ್ಯವೋ, ಆ ಸ್ವಾತಂತ್ರ್ಯಕ್ಕೆ ನಾವು ತೆರಬೇಕಾದ ಬೆಲೆಯ ಬಗ್ಗೆ ತಿಳಿಯುವುದು ಅಷ್ಟೇ ಮುಖ್ಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.
http://www.suvarnanews.tv/mobile/news/india/mohan-lal-comments-on-ongoing-anti-india-agitation-19924

posted from Bloggeroid

No comments:

Post a Comment