
ಮೊಣಕೈಗಳ ಹಿಂಬದಿ ಕಪ್ಪಾಗಿರುವುದು ಹಲವರ ಸಮಸ್ಯೆಯಾಗಿದೆ.ಇದನ್ನು ಹೋಗಲಾಡಿಸುವುವುದು ಹೇಗೆ ಎಂದು ಬಹಳ ಮಂದಿಗೆ ತಿಳಿದಿಲ್ಲ ಆದರೆ ಅದೇನು ದೊಡ್ಡ ಸಮಸ್ಯೆಯಲ್ಲ ನೀವು ಮನೆಯಲ್ಲಿಯೇ ಕುಳಿತು ಪೇಸ್ಟ್ ತಯಾರಿಸಿ ಇದರಿಂದ ಪರಿಹಾರ ಕಂಡುಕೊಳ್ಳಬಹುದು.ಬಹುತೇಕ ಸೌಂದರ್ಯ ತಜ್ನರು ಹೀಗೆ ಕಪ್ಪಗಿರುವುದನ್ನು ಸರಿಪಡಿಸಲು ಸೌತೆಕಾಯಿ ಮತ್ತು ಪಪ್ಪಾಯಿ ಪೇಸ್ಟ್ ಹಾಚೂವಂತೆ ಸಲಹೆ ನೀಡುತ್ತಾರೆ.
ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಇದನ್ನು ಮಾಡಿದರೆ ಉತ್ತಮ.ಮೊಣಕೈಗಳು ಎಷ್ಟು ಕಪ್ಪಾಗಿವೆ ಎನ್ನುವುದನ್ನು ನೋಡಿಕೊಂಡು ವಾರಕ್ಕೆ ಎಷ್ಟು ಸಲ ಪೇಸ್ಟ್ ಹಚ್ಚಿಕೊಳ್ಳಬೇಕುಎನ್ನುವುದನ್ನು ನಿರ್ಧರಿಸಬೇಕು.
ಈ ಮೊಣಕೈಗಳ ಮೇಲೆ ನಿತ್ಯವೂ ಚಿಕಿತ್ಸೆ ಮಾಡಿಕೊಳ್ಳುವವರು ಅಥವಾ ನಿತ್ಯವೂ ಗಮನ ನೀಡಲು ಸಾಧ್ಯವಿರುವವರು ಕಡ್ಲೆಹುಡಿ ಮತ್ತು ಮೊಸರನ್ನು ಮಿಶ್ರಣಮಾಡಿ ಪೇಸ್ಟ್ ಅನ್ನು ಹಚ್ಚಿಕೊಳ್ಳಬಹುದು.ಸುಮಾರು ಅರ್ಧಗಂಟೆಗಳ ಕಾಲ ಇತ್ತು ನಂತರ ತೆಗೆಯಬಹುದು.
ಜೇನುತುಪ್ಪ ಮತ್ತು ಗಂಧವೂ ಉತ್ತಮ ಪರಿಹಾರ.ವಾರಕ್ಕೆ ಕನಿಷ್ಠ ಎರಡು ಬಾರಿ ಈ ಮಿಶ್ರಣವನ್ನು ಹಚ್ಚಿದರೆ ಆರೋಗ್ಯಕರ ಮತ್ತು ಸ್ವಚ್ಚ ಮೊಣಕೈ ಪಡೆಯಬಹುದು.ಈ ಮಿಶ್ರಣವು ಮೃತ ಚರ್ಮದ ಕೋಶಗಳನ್ನು ಮೊಣಕೈನಿಂದ ದೂರವಾಗಿರುವಂತೆ ಮಾಡಿ ಫೋಷಣೆ ಕೊಡುತ್ತದೆ. ಲಿಂಬೆ ಹಣ್ಣನ್ನು ಕತ್ತರಿಸಿ ಉಜ್ಜಿಕೊಳ್ಳುವುದರಿಂದಲೂ ಮೊಣಕೈನ ಚರ್ಮ ತಿಳಿಯಾಗುವುದು.
ಮಾಹಿತಿ
♦♦♦♦♦ ಆರೋಗ್ಯ ಮಾಹಿತಿ ♦♦♦♦♦
posted from Bloggeroid
No comments:
Post a Comment