Thursday, February 18, 2016

cheapest smartphone: ಬರೇ 251ರೂಪಾಯಿ, ಬುಕ್ ಮಾಡೋದು ಹೇಗೆ?

cheapest smartphone:
ಬರೇ 251ರೂಪಾಯಿ, ಬುಕ್ ಮಾಡೋದು ಹೇಗೆ?

ಉದಯವಾಣಿ, Feb 17, 2016, 12:37 PM IST
image: http://www.udayavani.com/sites/default/files/styles/article_new_image/public/images/articles/2016/02/17/freedom251-price.jpg?itok=lkLx9QB5


ಹೊಸದಿಲ್ಲಿ: ದೇಶೀಯ ಹೆಡ್‌ ಸೆಟ್‌ ತಯಾರಿಕಾ ಕಂಪೆನಿ ರಿಂಗಿಂಗ್‌ ಬೆಲ್ಸ್‌ ವಿಶ್ವದಲ್ಲೇ ಅಗ್ಗದ ಸ್ಮಾರ್ಟ್‌ಫೋನನ್ನು ಬುಧವಾರ ಸಂಜೆ ಬಿಡುಗಡೆ ಮಾಡುತ್ತಿದೆ. ವಿಶೇಷವೆಂದರೆ ಫ್ರೀಡಂ 251' ಹೆಸರಿನ ಸ್ಮಾರ್ಟ್‌ಫೋನನ್ನು ಕೇವಲ 499 ರೂ.ಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು ಲಾಂಚಿಂಗ್‌ ಆಫ‌ರ್‌ ಆಗಿ ಕೇವಲ 251 ರೂಪಾಯಿಗೆ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಚೀಪೆಸ್ಟ್‌ ಸ್ಮಾರ್ಟ್‌ ಫೋನ್‌ ಬುಕ್‌ ಮಾಡುವುದು ಹೇಗೆ?
freedom251.com ಆನ್‌ಲೈನ್‌ ಮೂಲಕ ಫೆಬ್ರವರಿ 18 ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 21 ರ 8 ಗಂಟೆ ರಾತ್ರಿಯ ವರೆಗೆ 251 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದ್ದು,ಜೂನ್‌ 30 ರ ಒಳಗೆ ಫೋನ್‌ ನಿಮ್ಮ ಕೈಸೇರಲಿದೆ.

ಸ್ಮಾರ್ಟ್‌ಫೋನ್‌ನ ವಿವರಗಳು
5.1 ಆಂಡ್ರಾಯಿಡ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದ್ದು,4.00 ಇಂಚು ಡಿಸ್‌ಪ್ಲೇ, ಫ್ರೊಂಟ್ ಕ್ಯಾಮರಾ 0.3 ಮೆಗಾ ಫಿಕ್ಸೆಲ್‌ ,3.2 ಮೆಗಾ ಫಿಕ್ಸೆಲ್‌ ರೇರ್‌ ಕ್ಯಾಮರಾ,1 ಜಿಬಿ ರಾಮ್‌ ,8 ಜಿಬಿ ಸ್ಟೋರೆಜ್‌ ಕ್ಯಾಪೆಸಿಟಿ ಹೊಂದಿದ್ದು 32 ಜಿಬಿಗೆ ವಿಸ್ತರಿಸಬಹುದಾಗಿದೆ.

ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಅವರು 'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದು, ಉದ್ಘಾಟನಾ ಸಮಾರಂಭ ಸರಕಾರ ಇತ್ತೀಚೆಗೆ ಕೈಗೊಂಡ ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಲಿದೆಎಂದು ಕಂಪೆನಿಯ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ ಫೋನ್‌ 1500 ರೂ. ಆಗಿದೆ. ಕಳೆದ ವರ್ಷ ಡಾಟಾವಿಂಡ್‌, ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯೂನಿಕೇಷನ್‌ನ ಸಹಭಾಗಿತ್ವದಲ್ಲಿ 999 ರೂ.ಗೆ ಸ್ಮಾರ್ಟ್‌ ಫೋನ್‌ ನೀಡುವುದಾಗಿ ಪ್ರಕಟಿಸಿತ್ತು. ಆದರೆ, ಈ ಫೋನ್‌ ಮಾರುಕಟ್ಟೆಗೆ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಕಳೆದ ವರ್ಷ ಆರಂಭಗೊಂಡ ರಿಂಗಿಂಗ್‌ ಬೆಲ್ಸ್‌ ಮುಂದಿನ ದಿನಗಳಲ್ಲಿ ಸ್ವದೇಶಿ ನಿರ್ಮಿತ ಗುಣಮಟ್ಟದ ಸ್ಮಾರ್ಟ್‌ಫೋನ್‌ ಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಿದೆ. ಕಂಪೆನಿ ಈಗಾಗಲೇ ಅತಿ ಅಗ್ಗದ 4ಜಿ ಸ್ಮಾರ್ಟ್‌ಫೋನ್‌ ಅನ್ನು 2,999 ರೂ.ಗೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು.

Read more at http://www.udayavani.com/kannada/news/national-news/133503/freedom-251-launch-your-5-point-cheatsheet-to-the-most-affordable-smartphone#EB5CxKfPpgkuU6Jz.99

posted from Bloggeroid

No comments:

Post a Comment