
ನನಗೆ ಯಾವುದೇ ಜಾತಿ ಪದ್ಧತಿಯಲ್ಲಿ ನಂಬಿಕೆ ಇಲ್ಲ. ಮಾನವೀಯತೆ ಮೊದಲು, ದೇವರು ನಂತರ. ಎಲ್ಲರನ್ನೂ ಸಮಾನವಾಗಿ ಕಾಣುವ. ಜಾತಿ ಪದ್ಧತಿ ತೊಲಗಿಸೋಣ. ವಾಟ್ಸಾಪ್ ನಲ್ಲಿ ಬಂದ ಈ ಫಾರ್ವರ್ಡ್ ಇಷ್ಟ ಆಯ್ತು. ಎಲ್ಲರೂ ಜಾತಿ ಬೇಡ ಅಂತಲೇ ಬ್ರಾಹ್ಮಣರನ್ನು ಜಾತಿಯ ಹೆಸರು ಹೇಳಿ ಹಂಗಿಸುವದು ಸರಿಯಲ್ಲ.
ನಾವು ಬ್ರಾಹ್ಮಣರು
ನಾವು ಕ್ಷತ್ರಿಯ ರಾಮನನ್ನು
ಆದರ್ಶ ಎಂದು ಪೂಜಿಸುತ್ತೇವೆ.
ಗೊಲ್ಲರ ಕ್ರಷ್ಣನನ್ನು
ಪರಮಾತ್ಮ ಎಂದು ಆರಾಧಿಸುತ್ತೇವೆ.
ಮಸಣ ಕಾಯುವ ಈಶ್ವರನನ್ನು
ಪರಮೇಶ್ವರ ಎಂದು ಭಜಿಸುತ್ತೇವೆ.
ಬ್ರಾಹ್ಮಣನಾದ ಬ್ರಹ್ಮನಿಗೆ
ಕೈಯನ್ನೂ ಮುಗಿಯುವುದಿಲ್ಲ...!
ಬ್ರಾಹ್ಮಣನಾದ ರಾವಣನನ್ನು
ದುಷ್ಟ ಎಂದು ಜರಿಯುತ್ತೇವೆ.
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ಜಾತಿವಾದಿಗಳು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತೇವೆ.
ಕಲೆ ಸಂಸ್ಕೃತಿಯನ್ನು ಆರಾಧಿಸುತ್ತೇವೆ.
ಯಕ್ಷಗಾನ ಸಂಗೀತವನ್ನು
ಆನಂದಿಸುತ್ತೇವೆ.
ಬೇರೆಯವರು ಮೇಲೇರಲು ನಾವು
ಏಣಿಯಾಗುತ್ತೇವೆ..
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ತಾಲಿಬಾನ್ ಸಂಸ್ಕೃತಿಯವರು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಕಣ್ಣಿಲ್ಲದವರಿಗೆ ಕಣ್ಣು ನೀಡಲಾಗದಿದ್ದರೂ
ಕನ್ನಡಕ ನೀಡುತ್ತೇವೆ.
ಅನ್ನ ನೀಡಲಾಗದಿದ್ದರೂ,
ಗಂಜಿ ನೀಡುತ್ತೇವೆ.
ಆದರೂ,ಪರರ ಕಣ್ಣಿಗೆ ನಾವು
ಶೋಷಣೆ ಮಾಡುವವರಾಗಿದ್ದೇವೆ.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಸರ್ಕಾರದ ಸವಲತ್ತು ಸಿಗದೇ ಇದ್ದಾಗ,
ದೇವರು ಕೊಟ್ಟಿದ್ದಾನಲ್ಲಾ ಎನ್ನುತ್ತೇವೆ.
ಮೀಸಲಾತಿಯಿಂದ ಅನ್ಯಾಯವಾದರೆ,
ಮಕ್ಕಳನ್ನು ಸಾಲ ಮಾಡಿ ಓದಿಸಿ,
ಖಾಸಗಿ ಕಂಪನಿಗೆ ಕಳಿಸುತ್ತೇವೆ.
ನಾವು ದೇಶಕ್ಕೆ ಮಣ್ಣಿಗೆ ಕೊಡುಗೆ
ನೀಡುತ್ತ ಕೂರುತ್ತೇವೆ.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಎಲ್ಲರಿಂದಲೂ ಬೈಸಿಕೊಂಡೂ
ಎಲ್ಲರನ್ನೂ ಜಯಿಸಿದವರು...!!
Mamata Naik
posted from Bloggeroid
No comments:
Post a Comment