ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ Written by: manu | Sat, Feb 20, 2016, 12:37 [IST] Comments (0) ಸಮುದ್ರತೀರದ ಬೆಳೆಯಾದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ನಮ್ಮ ಹಿರಿಯರು ಪರಿಗಣಿಸಿ ಪ್ರತಿ ಮನೆಯಲ್ಲಿಯೂ ನೆಟ್ಟಿದ್ದರಿಂದ ಇಂದು ಇಡಿಯ ಭಾರತದಲ್ಲಿ ತೆಂಗಿನ ಮರಗಳು ಇಲ್ಲದ ಊರೇ ಇಲ್ಲವೆಂದು ಹೇಳಬಹುದು. ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಹೊರತು ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ಇಡಿಯ ವರ್ಷ ದೊರಕುತ್ತದೆ. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಅದರಲ್ಲೂ ಮೂತ್ರವನ್ನು ಸ್ವಚ್ಛಗೊಳಿಸಲು ಮತ್ತು ದೇಹದಲ್ಲಿ ನೀರು ಮತ್ತು ಶಕ್ತಿಯ ಕೊರತೆಯಾದಾಗ ಕುಡಿಯಬಹುದಾದ ಅತ್ಯುತ್ತಮ ದ್ರವ ಎಂದರೆ ಎಳನೀರು. ಆದರೆ ಈ ನೀರನ್ನು ಮುಂಜಾನೆ ಎದ್ದ ಬಳಿಕ ಪ್ರಥಮ ಆಹಾರವಾಗಿ ಕುಡಿಯುವುದರ ಮಹತ್ವ ನಿಮಗೆ ತಿಳಿದಿದೆಯೇ? ಹೌದು, ಎಳೆನೀರಿನ ಆರೋಗ್ಯಕರ ಪರಿಣಾಮಗಳನ್ನು ಪಟ್ಟಿ ಮಾಡಲು ಹೊರಟರೆ ದೊಡ್ಡ ಪಟ್ಟಿಯೇ ಬೇಕಾಗಬಹುದು. ಆಯಾಸದಿಂದ ತಣಿದ ದೇಹಕ್ಕೆ ಪುನರ್ಚೇತನ ನೀಡುವುದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಹಲವು ರೋಗಗಳಿಂದ ರಕ್ಷಣೆ ನೀಡುವುದು, ತೂಕ ಇಳಿಯುವಲ್ಲಿ ಸಹಕರಿಸುವುದು, ಹೊಟ್ಟೆಯ ಉರಿಯನ್ನು ತಣಿಸುವುದು, ಮೂತ್ರವನ್ನು ಹೆಚ್ಚಿಸಿ ದೇಹದ ಕಲ್ಮಶವನ್ನು ನಿವಾರಿಸಲು ನೆರವಾಗುವುದು, ರೋಗಿಗಳಿಗೆ ಶೀಘ್ರವೇ ಗುಣವಾಗಲು ಸಹಕರಿಸುವುದು ಮೊದಲಾದ ಹಲವು ಪ್ರಯೋಜನಗಳಿವೆ. ಕ್ರೀಡೆ, ಮೊದಲಾದ ದೈಹಿಕ ಚಟುವಟಿಕೆಗಳ ಬಳಿಕ ಬಳಲಿದ ಶರೀರಕ್ಕೆ ಶಕ್ತಿ ನೀಡಲು ಸಹಾ ಎಳನೀರಿನಲ್ಲಿರುವ ಎಲೆಕ್ಟ್ರೋಲೈಟುಗಳೆಂಬ ಕಣಗಳು ಸಹಕರಿಸುತ್ತವೆ. ಒಂದು ವೇಳೆ ಇದರೊಂದಿಗೆ ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಪ್ರೋಟೀನುಯುಕ್ತ ಜೀವಜಲವನ್ನು ಪಡೆಯಬಹುದು. ಬನ್ನಿ, ಎಳೆನೀರು ದೇಹಕ್ಕೆ ಇನ್ನು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ...
Read more at: http://kannada.boldsky.com/health/wellness/2016/why-drink-coconut-water-the-morning-011399.html
http://kannada.boldsky.com/health/wellness/2016/why-drink-coconut-water-the-morning-011399.html
Read more at: http://kannada.boldsky.com/health/wellness/2016/why-drink-coconut-water-the-morning-011399.html
http://kannada.boldsky.com/health/wellness/2016/why-drink-coconut-water-the-morning-011399.html
posted from Bloggeroid
No comments:
Post a Comment