ಬೆಳ್ಳುಳ್ಳಿ, ಮಕ್ಕಳ ಆರೋಗ್ಯದ ಪಾಲಿಗೆ ಸಂಜೀವಿನಿ
Written by: Deepu
| Wed, Feb 10, 2016, 10:18 [IST]
Comments (0)
ವರ್ಷಾಂತರಗಳಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ಅಜ್ಜಿ ತಲೆ ಮೇಲೆ ಗುದ್ದಿದರೆ ನೂರು ಮೊಮ್ಮಕ್ಕಳು ಎಂಬ ಒಗ್ಗಟ್ಟಿಗೆ ಉತ್ತರ ನೀಡುವ ಈ ಪುಟ್ಟ ಬಿಳಿಯ ಎಸಳಿನಲ್ಲಿ ಆರೋಗ್ಯಕರ ಅಂಶಗಳ ಭಂಡಾರವೇ ಇದೆ. ಸಾವಿರಾರು ವರ್ಷಗಳಿಂದಲೂ ಭಾರತೀಯರು ಈ ಬೆಳ್ಳುಳ್ಳಿಯನ್ನು ತಮ್ಮ ಆಹಾರದ ಒಂದು ಅಂಗವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ
ಕೆಲವರು ಮಾತ್ರ ಬೆಳ್ಳುಳ್ಳಿಗಳನ್ನು ನಾನಾ ಕಾರಣದಿಂದ ದೂರವಿಡುತ್ತಾರೆ. ಆದರೆ ನಾವು ಇಂದು ಹೇಳಲು ಹೋಗುತ್ತಿರುವುದು ಬೆಳ್ಳುಳ್ಳಿಯಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಕುರಿತು. ಅದರಲ್ಲೂ ವಿಶೇಷವಾಗಿ ಬೆಳ್ಳುಳ್ಳಿಗಳಿಂದ ಎಳೆ ಮಕ್ಕಳಿಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಬೆಳ್ಳುಳ್ಳಿಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಮಗುವಿನ ದೇಹದಲ್ಲಿರುವ ಇನ್‌ಫೆಕ್ಷನ್‌ಗಳನ್ನು ಹೋಗಲಾಡಿಸಬಹುದು. ಏಕೆಂದರೆ ಎಳೆ ಮಕ್ಕಳು ಆಗಾಗ ಶೀತ ಮುಂತಾದ ರೋಗಗಳಿಂದ ಬಳಲುತ್ತಾ ಇರುತ್ತಾರೆ. ಈ ನಿಟ್ಟಿನಲ್ಲಿ ನಿಮಗೆ ಬೆಳ್ಳುಳ್ಳಿಯು ಉಪಯೋಗಕ್ಕೆ ಬರುತ್ತದೆ ಮತ್ತು ಮಗುವಿನ ಶೀತವನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಬಿ ಮತ್ತು ವಿಟಮಿನ್ ಬಿ6 ಇರುವುದರ ಜೊತೆಗೆ, ಮ್ಯಾಂಗನೀಸ್, ಸೆಲೆನಿಯಂ, ಪೊಟಾಶಿಯಂ ಮತ್ತು ಕಬ್ಬಿಣಾಂಶ ಸಹ ಹೆಚ್ಚಾಗಿರುತ್ತದೆ. ಬೆಳ್ಳುಳ್ಳಿಯು ಮಗುವಿನ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಆಹಾರವನ್ನು ಮತ್ತಷ್ಟು ರುಚಿಕರವನ್ನಾಗಿ ಮಾಡುತ್ತದೆ. ಅಲ್ಲದೆ ಮಕ್ಕಳಿಗೆ ಬೆಳ್ಳುಳ್ಳಿಯನ್ನು ನೀಡುವುದು ಒಳ್ಳೆಯದರ ಜೊತೆಗೆ ಸುರಕ್ಷಿತವು ಸಹ ಹೌದು ಎಂಬುದು ವಿಶೇಷ. ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ
ಬೆಳ್ಳುಳ್ಳಿಯಲ್ಲಿ ಹಲವಾರು ಪೋಷಕಾಂಶಗಳು ಇದ್ದು, ಇವು ಎಲ್ಲಾ ವಯಸ್ಸಿನ ಜನರಿಗೆ ಅನುಕೂಲವನ್ನು ಉಂಟು ಮಾಡುತ್ತದೆ. ಇದನ್ನು ಮಗುವು ಆರು ತಿಂಗಳ ವಯಸ್ಸಿಗೆ ಬಂದಾಗ ಪರಿಚಯಿಸಬಹುದು. ಇದು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಹಾಲು ಕುಡಿಸುವ ತಾಯಿಗೂ ಸಹ ಬೆಳ್ಳುಳ್ಳಿಗಳನ್ನು ನೀಡುತ್ತಾರೆ. ಆ ಹಾಲಿನ ಮೂಲಕ ಸಹ ಬೆಳ್ಳುಳ್ಳಿಯ ಪೋಷಕಾಂಶಗಳು ಮಗುವಿಗೆ ತಲುಪಲಿ ಎಂಬ ಸದುದ್ದೇಶ ಇದರಲ್ಲಿರುತ್ತದೆ. ಹಾಗಾಗಿ ಇಂದು ಬೋಲ್ಡ್‌ಸ್ಕೈ ನಿಮಗಾಗಿ ಅಂದರೆ ನಿಮ್ಮ ಮಗುವಿಗಾಗಿ ಬೆಳ್ಳುಳ್ಳಿಯಿಂದ ದೊರೆಯುವ ಇನ್ನಿತರ ಪ್ರಯೋಜನಗಳ ಕುರಿತು ತಿಳಿಸಿಕೊಡಲು ಈ ಲೇಖನವನ್ನು ತಂದಿದೆ, ಬನ್ನಿ ಮುಂದೆ ಓದಿ...
http://kannada.boldsky.com/pregnancy-parenting/kids/2016/health-benefits-garlic-babies-011327.html

posted from Bloggeroid
No comments:
Post a Comment