ಸಾರ್ಥಕ ರಥಸಪ್ತಮಿ.

ಸಾರ್ಥಕ ರಥಸಪ್ತಮಿ. ಇನ್ನೂ ಸೂರ್ಯೋದಯವಾಗಿಯೇ ಇರಲಿಲ್ಲ. ನಸುಕಿನ 5.45 ರ ಸುಮಾರಿಗೆ ಹಾಸನ ಜಿಲ್ಲಾ ಕ್ರೀಢಾಂಗಣದಲ್ಲಿ ಸಾವಿರಾರು ಯೋಗಾಭಿಮಾನಿಗಳು ಸೇರಿದ್ದರು. 6.00 ಗಂಟೆಯಿಂದ ಸಾಮೂಹಿಕ ಸೂರ್ಯನಮಸ್ಕಾರವನ್ನು ಮಾಡುವುದಾಗಿ ಪ್ರಕಟಿಸಿದ್ದರೂ ನಮಗೆ ಆರಂಭದ ಸಮಯದ ಬಗ್ಗೆ ಅನುಮಾನವಿತ್ತು. ಒಂದು ಕಾಲೇಜಿನ ಮತ್ತು ಒಂದು ಶಾಲೆಯ ಮಕ್ಕಳೂ ಸಹ ನಮ್ಮೊಡನೆ ಭಾಗವಹಿಸುತ್ತೇವೆಂದು ತಿಳಿಸಿದ್ದರು. ಹಾಸನದ ಕೃಷಿ ವಿಜ್ಞಾನ ಕಾಲೇಜು ಶಾಂತಿಗ್ರಾಮದ ಸಮೀಪವಿದೆ. ಅಲ್ಲಿಂದ ವಿದ್ಯಾರ್ಥಿಗಳು ಬರುವುದಾಗಿ ತಿಳಿಸಿದ್ದರು. ಅಲ್ಲಿಂದ ಬರಬೇಕಾದರೆ ಅವರೆಲ್ಲಾ ಕನಿಷ್ಠ ಬೆಳಗಿನ ಜಾವ 4.00 ಕ್ಕೆ ಎದ್ದು ಶೌಚಾದಿಗಳನ್ನು ಮುಗಿಸಿ ಬರಬೇಕು. ಅದೆಲ್ಲಾ ಪರಿಗಣಿಸಿ ನಾವು 6.15 ಕ್ಕೆ ಆರಂಭಿಸೋಣವೆಂದು ಆಲೋಚಿಸಿದ್ದೆವು. ಆದರೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮ ಆರಂಭವಾಯ್ತು. ನಾವು 32 ಸೂರ್ಯನಮಸ್ಕಾರವನ್ನು ಮಾಡಿದ ನಂತರ ಸೂರ್ಯ ಕಾಣಿಸಿಕೊಂಡ. ಅದೊಂದು ಅಪೂರ್ವ ದೃಶ್ಯ. ಸ್ನೇಹಿತ ಚಿನ್ನಪ್ಪ ಆದೃಶ್ಯವನ್ನು ಸೆರೆ ಹಿಡಿದಿರಬಹುದು. ಆನಂತರ ಆ ಚಿತ್ರವನ್ನೂ ಹಾಕುವೆ. 12 ಸೂರ್ಯನಮಸ್ಕಾರದ ನಂತರ ಎರಡು ನಿಮಿಷ ವಿಶ್ರಾಂತಿ ಕೊಟ್ಟು ಅದರ ಮಹತ್ವವನ್ನು ತಿಳಿಸಲಾಗುತ್ತಿತ್ತು. 84 ಸೂರ್ಯನಮಸ್ಕಾರಗಳಾದಾಗ ಮತ್ತು 100 ಸೂರ್ಯನಮಸ್ಕಾರ ಮುಗಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ನೂರೆಂಟು ಸೂರ್ಯನಮಸ್ಕಾರ ವಾದನಂತರ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಯೋಧರಿಗೆ ನಮನ ಸಲ್ಲಿಸಲಾಯ್ತು. ರಥಸಪ್ತಮಿಯ ಅರ್ಥಪೂರ್ಣ ಆಚರಣೆಯಾಯ್ತು. ಹಾಸನಜಿಲ್ಲಾ ಶ್ರೀ ಪತಂಜಲಿಯೋಗ ಒಕ್ಕೂಟದ ಪ್ರಯತ್ನ ಸಾರ್ಥಕವಾಯ್ತು

posted from Bloggeroid
No comments:
Post a Comment