Monday, February 8, 2016

ಶೀಘ್ರದಲ್ಲೇ ದೆಹಲಿ-ಮುಂಬೈ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಓಡಾಟ ಆರಂಭ

ಶೀಘ್ರದಲ್ಲೇ ದೆಹಲಿ-ಮುಂಬೈ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಓಡಾಟ ಆರಂಭ
Published: 08 Feb 2016 08:45 PM IST
High Speed Train To Take Trial Run On Delhi-Mumbai Route Soon

ತಲ್ಗೊ ರೈಲು
ನವದೆಹಲಿ: ಸ್ಪ್ಯಾನಿಶ್ ನಿರ್ಮಿತ ತಲ್ಗೊ ಹೈ ಸ್ಪೀಡ್ ರೈಲು ಶೀಘ್ರದಲ್ಲೇ ದೆಹಲಿ-ಮುಂಬೈ

ಮಧ್ಯೆ ಪ್ರಾಯೋಗಿಕ ಓಡಾಟವನ್ನು ಆರಂಭಿಸಲಿದೆ. ಈ ರೈಲು ಗಂಟೆಗೆ 160 ರಿಂದ 200 ಕಿ.ಮೀ.ವೇಗದಲ್ಲಿ ಚಲಿಸುತ್ತದೆ.

ಪ್ರಾಯೋಗಿಕ ಓಡಾಟ ಯಶಸ್ವಿಯಾದರೆ, ದೇಶದ ಇತರೆ ಭಾಗಗಳಲ್ಲೂ ಹೈ ಸ್ಪೀಡ್ ರೈಲನ್ನು ಓಡಿಸಲಾಗುವುದು ಎಂದು ರೇಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಲ್ಗೊ ಶೀಘ್ರದಲ್ಲೇ ದೆಹಲಿ-ಮುಂಬೈ ಕಾರಿಡಾರ್ ನಲ್ಲಿ ಸಮಯ ಆಧಾರಿತ ಓಡಾಟವನ್ನು ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ.

ಸ್ಪ್ಯಾನಿಶ್ ರೈಲು ನಿರ್ಮಾಣ ಕಂಪನಿಯೊಂದು ಪ್ರಾಯೋಗಿಕ ಓಡಾಟಕ್ಕಾಗಿ ಈ ತಲ್ಗೊ ರೈಲನ್ನು ಉಚಿತವಾಗಿ ನೀಡಿದೆ.

posted from Bloggeroid

No comments:

Post a Comment