Sunday, February 14, 2016

💐💐🌹💐ಪ್ರಪಂಚ 💐🌹💐💐

💐💐🌹💐ಪ್ರಪಂಚ 💐🌹💐💐

🔹ನಮ್ಮಲ್ಲಿ ಎತ್ತರವಾದ ಕಟ್ಟಡಗಳಿವೆ,ಆದರೆ ಸ್ಪೋಟಿಸುವ ಸ್ವಭಾವಗಳು ಇವೆ
🔹ರಸ್ತೆಗಳು ವಿಶಾಲವಾಗಿವೆ,ಆದರೆ ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ,ಆದರೆ ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,ಆದರೆ ಕುಟುಂಬ ಚಿಕ್ಕದಾಗುತ್ತಿದೆ!
🔹ಅನುಕೂಲಗಳು ಹೆಚ್ಚಿವೆ,ಆದರೆ ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ,ಆದರೆ ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ,ಆದರೆ ಕಡಿಮೆ ನಗುತ್ತೇವೆ.!
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,ಬೆಳಿಗ್ಗೆ ತುಂಬ ಬಳಲಿಕೆಯಿಂದ ಏಳುತ್ತೇವೆ!
🔹ಕಡಿಮೆ ಓದುತ್ತೇವೆ,ತುಂಬ ಟೀವಿ ನೋಡುತ್ತೇವೆ :ಮತ್ತು ಅಪರೂಪಕ್ಕೆ ಪ್ರಾರ್ಥಿಸುತ್ತೇವೆ!
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ ನಮ್ಮ ಮೌಲ್ಯಗಳು ಇಳಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ ಕಡಿಮೆ ಪ್ರೀತಿಸುತ್ತೇವೆ ಮತ್ತು ತುಂಬ ಸುಳ್ಳು ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕಕ್ಕೆ ಮುಟ್ಟಿ ಬಂದಿದ್ದೇವೆ,ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ!
🔹ನಾವು ಬಹಿರಂಗದಲ್ಲಿ ಗೆಲ್ಲುತ್ತೇವೆ,ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧೀಕರಿಸಿದ್ದೇವೆ,ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ!
🔹ಬರವಣಿಗೆ ಹೆಚ್ಚಾಗಿದೆ,ಆದರೆ ಅರಿವು ಕಡಿಮೆಯಾಗಿದೆ!
🔹ಹೆಚ್ಚು ಯೋಚಿಸುತ್ತೇವೆ,ಆದರೆ ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ,ಆದರೆ ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ,ಆದರೆ ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ಆಕಾರ,ಆದರೆ ಕುಬ್ಜವ್ಯಕ್ತಿತ್ವದ ಮನುಷ್ಯರ ಕಾಲ!
🔹ಒಳ್ಳೆ ಲಾಭ ಸಂಪಾದನೆ,ಆದರೆ ಟೊಳ್ಳು ಸಂಬಂಧಗಳ ಕಾಲ!
🔹ವಿಶ್ವಶಾಂತಿಯ ಬಗ್ಗೆ ಮಾತನ್ನು ಆಡುತ್ತೇವೆ,ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಹೆಚ್ಚು ವಿರಾಮವಿದೆ,ಆದರೆ ಕಡಿಮೆ ಆರಾಮವಿದೆ
🔹ಗಂಡ ಹೆಂಡಿರು ದುಡಿಮೆ ಹೆಚ್ಚಾಗಿದೆ,ಆದರೆ ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ ವಾಸಸ್ಥಾನವೇ ಮುರಿದುಬಿದ್ದಿದೆ!
🔹ಹಸಿವು ಹೆಚ್ಚಿಸಲು-ತಗ್ಗಿಸಲು-ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ,ದಪ್ಪವಾಗಲು-ಸಣ್ಣಗಾಗಲು,ತೆಪ್ಪಗಿರಲು-ಕುಪ್ಪಳಿಸಲು ಮಾತ್ರೆಗಳಿವೆ!
🔹ನಿದ್ದೆಗೂ-ನಿದ್ದೆಗೆಡುವುದಕ್ಕೂ,ಬದುಕುವುದಕ್ಕೂ-ಕೊನೆಗೆ ಸಾಯುವದಕ್ಕೂ ಮಾತ್ರೆಗಳೇ ಬೇಕು!

ಇದು ಇಂದಿನ ವಿಶ್ವದ ವಿಚಿತ್ರ ಅಲ್ಲವೇ ಯೋಚಿಸಿ.....,

🌴🌴🌴🌴🌴🌴🌴🌴🌴🌴🌴

posted from Bloggeroid

No comments:

Post a Comment