Sunday, February 14, 2016

ರಥಸಪ್ತಮಿ " ಹಬ್ಬ



ಸ್ನೇಹಿತರೇ, ನಾಳೆ "ರಥಸಪ್ತಮಿ " ಹಬ್ಬ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ನಾಳೆ ಭಾನುವಾರ ರಥಸಪ್ತಮಿ ಸೂರ್ಯದೇವನ

ಹುಟ್ಟುಹಬ್ಬ, ಹಾಗೂ ಆರಾಧನೆಯ ದಿವಸ , ಈ ದಿನದಲ್ಲಿ ನೆಡೆಸುವ ಎಲ್ಲಾ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗುವದೆಂಬ ನಂಬಿಕೆ ಬಲವಾಗಿದೆ. ಸೂರ್ಯದೇವ ಇಂದು ಸಿಂಹ

ರಾಶಿಯಿಂದ ಮಕರ ರಾಶಿಗೆ ತನ್ನ ರಥವೇರಿ ಹೊರಡುತ್ತಾನೆ--ಎಲ್ಲಾ ದೇವಸ್ಥಾನಗಳಲ್ಲಿ ಇಂದಿನಿಂದ ರಥೋತ್ಸವಗಳು ಪ್ರಾರಂಭವಾಗುತ್ತದೆ -
ಜಗತ್ತಿನ ಸಕಲ ಜೀವರಾಶಿಗಳ ಬೆಳವಣಿಗೆ, ಚಟುವಟಿಕೆಗಳು ಸೂರ್ಯನಿಂದಲೇ ನೆಡೆಯುವುದು, ಇಂದು ವೈವಸ್ವತ

ಮನ್ವಂತರದ ಆರಂಭದ ದಿನ ಸೂರ್ಯನು ತನ್ನ ಸಪ್ತಾಶ್ವಗಳ ರಥವನ್ನೇರಿ ಉತ್ತರದಿಕ್ಕಿನ ಮಾರ್ಗವಾಗಿ ಹೊರಡುವನು -
ಇಂದು ಬೆಳಗಿನ ಜಾವದಲ್ಲಿ ಸಾಧ್ಯವಾದಲ್ಲಿ ನದಿ, ಸಮುದ್ರ, ಸಂಗಮಗಳಲ್ಲಿ,(ಮಾಘ ಸ್ನಾನಕ್ಕೆ ಬಹಳ ಪ್ರಾಮುಖ್ಯತೆಯಿದೆ) ಅಥವಾ ಮನೆಯಲ್ಲೇ ಗಂಗೆಯನ್ನು ನೆನೆಸಿಕೊಂಡು ಸ್ನಾನಮಾಡಿ -- ಸ್ನಾನಮಾಡುವಾಗ ಎರಡುಭುಜದ ಮೇಲೆ ತಲೆಯಮೇಲೆ ಎಕ್ಕದ ಎಲೆಗಳನ್ನಿಟ್ಟುಕೊಂಡು ಸ್ನಾನ ಮಾಡಿದರೆ ಆಯುರಾರೋಗ್ಯ ಹೆಚ್ಚುವುದೆಂದು ತಿಳಿಸಿದ್ದಾರೆ --- ನಂತರ ಪೂಜೆಪುನಸ್ಜಾರ ಮುಗಿಸಿ ಪೂರ್ವಾಭಿಮುಖವಾಗಿ ನಿಂತು ಸೂರ್ಯನಮಸ್ಕಾರ ಮಾಡಬೇಕು, ಸೂರ್ಯನಾಮಾವಳಿ ಜಪಿಸುತ್ತಾ ೧೦೮ ನಮಸ್ಕಾರ ಮಾಡುತ್ತಾರೆ --- ಕೈಲಾಗದವರು ೧೨ ನಮಸ್ಕಾರಗಳನ್ನಾದರೂ ಮಾಡಬೇಕು --- ಸೂರ್ಯನಿಗೆ ಪ್ರಿಯವಾದ ರವೆ ಪಾಯಸ ಮಾಡಿ ನೈವೇದ್ಯ ಮಾಡಿ ಎಲ್ಲರೂ ಸ್ವೀಕರಿಸಬೇಕು, ಆದಿತ್ಯಹೃದಯವನ್ನು ಇಂದಾದರೂ ಪಾರಾಯಣ ಮಾಡಿದರೆ ಆಯುರಾರೋಗ್ಯ,ಐಶ್ವರ್ಯ, ವಿದ್ಯಾ ಬುದ್ದಿ ತೇಜಸ್ಸು ಹೆಚ್ಚುವುದರಲ್ಲಿ ಯಾವ ಸಂಶಯವೇ ಇಲ್ಲವೆಂದು ತಿಳಿದುಬಂದಿದೆ --
ಯೋಗಮಾಡುವವರಿಗೆ ಸೂರ್ಯನಮಸ್ಕಾರವೇ ಪ್ರಾಧಾನ್ಯ -- ರಥಸಪ್ತಮಿಯಂದು ಎಲ್ಲಾ ತರಗತಿಗಳಲ್ಲೂ , ದೊಡ್ಡ ದೊಡ್ಡ ಮೈದಾನಗಳಲ್ಲೂ , ಯೋಗ ತರಬೇತುದಾರರು ನೂರಾರು, ಸಾವಿರಾರು ಜನರಿಂದ ಸೂರ್ಯನಮಸ್ಕಾರದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ -- ಈಬಾರಿ ಭಾನುವಾರವೇ ಭಾನುವಿನ ಹುಟ್ಟುಹಬ್ಬ ಬಂದಿರುವುದು ವಿಶೇಷ ವಾಗಿದೆ -

ಸ್ನೇಹಿತರೇ ನಾವೂ ಈ ಶುಭದಿವಸದಂದು ನಮ್ಮ ಕೈಲಾದಷ್ಟು ಸೂರ್ಯನನಸ್ಕಾರ ಮಾಡಿ ಧ್ಯಾನ ಪೂಜೆ ನೈವೇದ್ಯಮಾಡಿ ಆ ಆದಿತ್ಯನ ಕೃಪೆಗೆ ಪಾತ್ರರಾಗಿ ಆಯುರಾರೋಗ್ಯ ಪಡೆದು ಸಂತಸವಾಗಿರೋಣ ನೀವೇನಂತೀರಿ ??????

posted from Bloggeroid

No comments:

Post a Comment