Monday, February 15, 2016

ಬಿಜೆಪಿಗೆ ತತ್ವ ಸಿದ್ದಾಂತ ಇದೆಯೆ ?


ಬಿಜೆಪಿಗೆ ತತ್ವ ಸಿದ್ದಾಂತ ಇದೆಯೆ ? ಇದ್ದರೆ ಯಾರಿಗಾಗಿ ? ಕಾರ್ಯಕರ್ತರು ಕೇವಲ ಗುಲಾಮರಂತೆ ದುಡಿಯುತ್ತಲೇ ಇರಬೇಕೆ? ಚುನಾವಣೆಗೆ ಸ್ಪರ್ಧೆಯಲ್ಲಿ ಮಾಡುವ ಯೋಗ್ಯತೆ ಇಲ್ಲವೆ? ಇದ್ದರೆ ಏಕೆ ಅವಕಾಶ ಸಿಕ್ಕಿಲ್ಲ? ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುವುದಾದರೆ ನೀವು ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತೆ ಅಲ್ಲವೇ? ಈ ಅನ್ಯಾಯ ಭ್ರಷ್ಟಾಚಾರ ಮಾಡಿದಂತೆ ಆಗುವುದಿಲ್ಲವೇ ? ಹಣ ಹೆಂಡ ಹಂಚದೆ ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತದ್ದೇವೆಂದು ಪ್ರಾಮಾಣಿಕವಾಗಿ ಹೇಳುವ ದೈರ್ಯ ಇದೆಯೇ? ಬಿಜೆಪಿಯ ಯಾವುದೇ ಚುನಾಯಿತ ಸದಸ್ಯ ಭೂಗಳ್ಳತನ ಮಾಡಿಲ್ಲವೆಂದು ಹೇಳುವ ನೈತಿಕ ಆತ್ಮ ಸ್ಥೈರ್ಯ ಇದೆಯೇ? ಅಕ್ರಮ ಹಣ ಗಳಿಕೆ ಮಾಡಿಲ್ಲವೇ? ಮಾಡಿಲ್ಲವಾದಲ್ಲಿ ಚುನಾಯಿತರ ಬಹುತೇಕರ ಆಸ್ತಿ ಇಮ್ಮಡಿಯಾದದ್ದು ಹೇಗೆ? ಕಾರ್ಯಕರ್ತರ ಆಸ್ತಿ ಏರಿಕೆಯಾಗದೆ ಕೇವಲ ಚುನಾಯಿತರಾದವರ ಆಸ್ತಿ ಮಾತ್ರ ಏಕೆ ಏರಿಕೆಯಾಯಿತು.? ಮಾಡಿರುವುದು ದೃಡವಾದರೆ ಪಕ್ಷದಿಂದ ಉಚ್ಚಾಟಿಸಬಲ್ಲಿರಾ?
ಒಂದು ಕುಟುಂಬದ ರಾಜಕಾರಣದ ಗುಲಾಮತನಕ್ಕೆ ಒಳಗಾಗಿದೆ ಎಂದು ಇಢಿ ರಾಜ್ಯ ಅಥವ ದೇಶದಲ್ಲಿ ಒಂದು ಕುಟುಂಬ ಹೊರತು ಪಡಿಸಿ ಬೇರೆ ಮನೆಯ ನಾಯಕರೆ ಗತಿ ಇಲ್ಲವೇ ಎಂದೆಲ್ಲಾ ಗೇಲಿ ಟೀಕೆ ಮಾಡುತ್ತಾ ರಾಜ್ಯದ ಜನತೆಯನ್ನು ಮರುಳು ಮಾಡಿದ ಬಿಜೆಪಿಯು ಹಳ್ಳಿಯಲ್ಲಿರುವ ಗಾದೆಯಂತೆ ಅತ್ತೆ ಸೊಸೆಗೆ ಬುದ್ಧಿ ಹೇಳಿ ಏನೋ ಮಾಡಬಾರದ ಕೆಲಸ ಮಾಡಿದಳಂತೆ ಹಾಗೆ ಕುಟುಂಬ ರಾಜಕಾರಣ ವಿರೋಧಿಸದ ಬಿಜೆಪಿಯ ರಾಜಕಾರಣವನ್ನು ಒಮ್ಮೆ ನೆನಪು ಮಾಡಿಕೊಡುತ್ತೇನೆ. ಚಿಕ್ಕೋಡಿಯ ಕತ್ತಿ ಶಾಸಕರು ಮಗ ಸಂಸದ, ಹುಬ್ಬಳ್ಳಿಯ ಶೆಟ್ಟರ್ ಶಾಸಕರು ತಮ್ಮ ವಿಧಾನ ಪರಿಷತ್ ಸದಸ್ಯ, ಹಾವೇರಿಯ ಉದಾಸಿ ಶಾಸಕ ಮಗ ಸಂಸದ ಶಿಕಾರಿಪುರದ ಯಡಿಯೂರಪ್ಪ ಸಂಸದ ಮಗ ಶಾಸಕ, ಈಶ್ವರಪ್ಪ ವಿಧಾನ ಪರಿಶತ್ ಸದಸ್ಯ ಮಗ ಜಿಲ್ಲಾ ಪಂಚಾಯ್ತಿ, ನಿರಾಣಿ ಮಾಜಿ ಮಂತ್ರಿ ತಮ್ಮ ವಿಧಾನ ಪರಿಷತ್ ಸದಸ್ಯ, ಮಡಕೇರಿಯ ಭೂಪಯ್ಯ ಶಾಸಕ ತಮ್ಮ ವಿಧಾನ ಪರಿಷತ್ ಸದಸ್ಯ, ಬೆಂಗಳೂರಿನ ವಿಶ್ವನಾಥ ಶಾಸಕ ಹೆಂಡತಿ ಜಿಲ್ಲಾ ಪಂಚಾಯ್ತಿ, ಚಿಕ್ಕಪೇಟೆಯ ಶಿಕುಮಾರ್,ಚಾಮರಾಜಪೇಟೆಯ ಗಣೇಶ,ಗಾಂದಿಬಝಾರ್ ಸದಾಶಿವ ಇಂತಹ ಇನ್ನು ಅನೇಕರುಗಳವರುಗಳು ತಮ್ಮ ಹೆಂಡತಿಯರಿಗ ಟಿಕೆಟ್ ಕೊಡಿಸಿ ಗೆಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದರೆ ಅನೇಕರ ಮಕ್ಕಳು ಈಗಾಗಲೆ ಮರಿ ನಾಯಕರುಗಳಾಗಿ ಪಕ್ಷದ ಉನ್ನತೆ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನ ಕುಟುಂಬ ರಾಜಕಾರಣವೆನ್ನವಿರೋ? ದ ಪಾರ್ಟಿ ವಿತ್ ಡಿಪರೆನ್ಸ್ ಎಂದು ಮೂರ್ಖರಾಗಿ ಇನ್ನೂ ದುಡಿಯಬೇಕೆ.? ಈ ಗುಲಾಮಿತನಕ್ಕೆ ಕೊನೆ ಎಂದು ಇವರಿಗೆ ತಕ್ಕ ಉತ್ತರ ಕೊಡಬೆರಕಲ್ಲವೇ ? ನಮ್ಮ ಪ್ರಾಮಾಣಿಕತೆಯ ದುರುಪಯೋಗಕ್ಕೆ ಇನ್ನು ಅವಕಾಶ ಕೊಡುತ್ತೀರಾ? ಸ್ವಜನಪಕ್ಷಪಾತವಿರುವ ಸ್ವಾರ್ಥಿ ರಾಜ್ಯ ಬಿಜೆಪಿಯ ಮುಖವಾಡ ಬಯಲುಗೊಳಿಸಲು ದೃಢ ನಿಶ್ಚಯ ಮಾಡಬೇಕಾಗಿದೆ. ಶಾಸ್ತ್ರ ಹೇಳಿ ಕೇಳುವುದರಿಂದ ಪ್ರಯೋಜನವಿಲ್ಲ. ಸಮಯಕ್ಕೆ ತಕ್ಕ ಉತ್ತರ ಕೊಡಬೇಕು. ಲೋಹ ಕಾದಿರುವಾಗ ಬಗ್ಹಿಸಬೇಕು.ಅದಕ್ಕೆ ಚುನಾವಣೆಯೇ ಸಕಾಲ.

posted from Bloggeroid

No comments:

Post a Comment