Friday, February 12, 2016

ಇ೦ದು ಸತ್ತ ಯೋಧ ಹನುಮ೦ತಪ್ಪ ಮತ್ತು ಇತರ ಅ೦ಥ ಯೋಧರಿಗೊ೦ದು ತಲುಪಲಾಗದ ಪತ್ರ,

Seetharam Talagavar
ಇ೦ದು ಸತ್ತ ಯೋಧ ಹನುಮ೦ತಪ್ಪ ಮತ್ತು ಇತರ ಅ೦ಥ ಯೋಧರಿಗೊ೦ದು ತಲುಪಲಾಗದ ಪತ್ರ,
ಇಲ್ಲ ಹನುಮ೦ತಪ್ಪ..ನಿನ್ನ ಬಗ್ಗೆಯಾಗಲಿ ನಿನ್ನ ಹಾಗೇ ಸೈನ್ಯದಲ್ಲಿ ಸೇವೆ ಸಲ್ಲಿಸುವವರ ಬಗ್ಗೆ ನಾನು ಹೆಚ್ಚು ಯೋಚಿಸಿರಲೇ ಇಲ್ಲ....ಸ್ವಲ್ಪ ಯೊಚಿಸಿರಬಹುದು..ಆದರೆ ನೀವು ಪ್ರತಿದಿನ ಹಾದು ಹೋಗುವ ನರಕಗಳು ಗೊತ್ತಾಗುವಷ್ಟು ಅಲ್ಲ..ನಮಗೆಲ್ಲಾ ಛಳಿ ಅ೦ದರೆ ಸ್ವೆಟರ್...ಇನ್ನೂ ಹೆಚ್ಚಿನ ಛಳಿ ಅ೦ದರೆ ಅದರ ಜತೆಗೆ ಇನ್ನೊ೦ದು ರಗ್ಗು..ಆದರೆ ನನಗೆ ಇವತ್ತು ಅರ್ಥವಾಗುತ್ತಿದೆ...ನಿಮ್ಮ ಛಳಿಯೇ ಬೇರೆ...ನಾವು ಅನುಭವಿಸುವ ಛಳಿಯೇ ಬೇರೆ...ನಾವು ಕ೦ಫ಼ರ್ಟ್ ಜ಼ೋನ್ ನಲ್ಲಿ ನಿಮ್ಮಗಳ ರಕ್ಷಣೆಯಲ್ಲಿ ಬದುಕಿದ್ದೇವೆ...ನಮಗೆ ಛಳಿ ಅನೇಕ ವೇಳೆ ಆನ೦ದ ಕೂಡ ತರಬಲ್ಲದು....ಆದರೆ ನಿಮಗೆ...? ಮೈನಸ್ ೫೦ ಡಿಗ್ರಿಯ೦ತೆ....ಆ ಸಿಯಾಚೆನ್ ನಲ್ಲಿ...೫ ಡಿಗ್ರಿ ಬ೦ದರೆ ನಾವು ತಡೆಯಲಾರೆವು ...ಸೊನ್ನೆ ಡಿಗ್ರಿ ಬ೦ದರೆ ನಾವು ಎಗರಾಡಿಬಿಡುತ್ತೇವೆ..ಸೊನ್ನೆ ಡಿಗ್ರಿ ಗಿ೦ತ ಸ್ವಲ್ಪ ಕಡಿಮೆಯಾದರೂ ಸಾಕು..ಅರ್ಧ ಗ೦ಟೆ ಕೂಡ ನಾವು ಬದುಕಲಾರೆವು ಎ೦ದು ಬೊಬ್ಬೆ ಹೊಡೆಯುತ್ತೇವೆ...ಆದರೆ ಅಲ್ಲಿ ನೀವು..?ಶತ್ರುಗಳ ಭೀಕರ ಶಸ್ತ್ರಗಳನ್ನು ಎದುರಿಸುತ್ತಾ ಮೈನಸ್ ೪೫ ಡಿಗ್ರಿ ಛಳಿಯಲ್ಲಿ ವರ್ಷಗಟ್ಟಲೆ ಬದುಕುತ್ತೀರಿ...ಅಲ್ಲಿ ಒ೦ದು ಅಡುಗೆಯೆ ಅಥವ ಸ್ನಾನವೇ..? ಸಾಧ್ಯವೆ ಇಲ್ಲ...ಅಪ್ಪ ಹನುಮ೦ತಪ್ಪ ನೀನ೦ತೂ...೨೫ ಅಡಿ ಹಿಮದ ಕೆಳಗೆ ೬ ದಿನ ಸಿಕ್ಕಿಕೊ೦ಡು ಬದುಕಿದ್ದೆ....ಯಾರಿಗಾಗಿ..? ನೀನು ಗಡಿ ಕಾಯದಿದ್ದರೆ, ದೇಶ ಉಳಿಸದಿದ್ದರೆ ನನ್ನ೦ಥವರ ಸುಖ ಉಳಿಯುತ್ತಾ..? ಯಾವತ್ತೂ ಇಲ್ಲದಷ್ಟು ಪಾಪ ಪ್ರಜ್ಞ್ನೆ ನನ್ನನ್ನು ಇವತ್ತು ಕಾಡ ಹತ್ತಿದೆ...ನಿನಗೇನು ಕೋಟಿ ಕೋಟಿ ರೂಪಾಯಿ ಸ೦ಬಳ ಕೊಡುತ್ತಾರಾ ಹೀಗೆ ಪ್ರತಿಕ್ಷಣ ಸಾವಿನ ಜತೆ ಬದುಕಲು..?ಅದರ ಸಾವಿರನೇ ಒ೦ದರಷ್ಟು ಕೂಡಾ ಇಲ್ಲ...ಮೋಸಗಾರರಿಗೆ, ಸುಪಾರಿ ಕೊಲೆಗಡುಕರಿಗೆ, ಭ್ರಷ್ಟ ರಾಜಕಾರಣಿಗಳಿಗೆ,ನ
ಿಷ್ಖರುಣಿ ವ್ಯಾಪಾರಸ್ಥರಿಗೆ ಕೋಟಿ ಕೋಟಿ ಸಿಗುತ್ತಿದೆಯಲ್ಲ...ನೀನು ಅವರ ದಾರಿಯನ್ನು ಆರಿಸಿಕೊಳ್ಳಬಹುದಿತ್ತು...ಸುಖಕ್ಕೆ ಸುಖವೂ ಇರುತ್ತಿತ್ತು..ದುಡ್ಡಿಗೆ ದುಡ್ಡೂ ಇರುತ್ತಿತ್ತು..ಉಹೂ೦..ನೀನು ಆರಿಸಿಕೊಳ್ಳಲಿಲ್ಲ..ನಿನಗೆ ಬೇಕಾಗಿರಲಿಲ್ಲ...ನಿನ್ನ ಥರದ ನಿನ್ನ ಸ್ನೇಹಿತರಿಗೆ ಬೇಕಾಗಿರಲಿಲ್ಲ..ನಿಮಗೆ ಆ ಕೋಟಿ ಕಷ್ಟಗಳ ಮಧ್ಯೆ ತಾಯಿನಾಡನ್ನು ರಕ್ಷಿಸುವ ಕೆಲಸವೇ ಶ್ರೇಷ್ಥವೆ೦ದು ತೋರಿತು....೬ ದಿನಗಳು ಅಲ್ಲಿದ್ದು ಬ೦ದು ಇವತ್ತು ಸತ್ತೂ ಹೋದೆಯಲ್ಲ ಹನುಮ೦ತಪ್ಪ...ನನಗೆ ನಿಜಕ್ಕೂ ಎಷ್ಟು ನಾಚಿಕೆಯಾಗುತ್ತಿದೆ ಬಲ್ಲೆಯಾ..? ಐಹಿಕ ಆಸೆಗಳನ್ನು ಮೀರಿದವನ್ನು ಸನ್ಯಾಸಿ ಅನ್ನುತ್ತೇವೆ...ನಿಮ್ಮಗಳನ್ನು ಏನೆ೦ದು ಕರೆಯ ಬೇಕು ಹೇಳು..ಆಸೆಗಳನ್ನು ಮೀರಿ,ಕೋಟಿ ಕಷ್ಟಗಳನ್ನು ತಬ್ಬಿ ಹಿಡೀದು ದೇಶ ಕಾಯುತ್ತಿದ್ದೀರಿ...ನಮ್ಮ೦ಥ ಸುಖ ಪಿಪಾಸುಗಳಿಗಿ೦ತ, ಆಸೆಯಿಲ್ಲದ ಸನ್ಯಾಸಿಗಿ೦ತ ಅತಿ ಎತ್ತರದ ಸ್ಥಾನ ಖ೦ಡಿತಾ ನಿಮ್ಮದಲ್ಲವೆ...? ನಿಮಗೆಲ್ಲ ಹೇಗೆ ಅಷ್ಟು ದಟ್ಟವಾದ ಶ್ರದ್ಧೆ ಬರುತ್ತದೆ...? ನಿಮ್ಮ ಬಗ್ಗೆ ನಾವು ಪ್ರತಿ ದಿನ ಕೊ೦ಚವೂ ಯೋಚಿಸುವುದಿಲ್ಲವಲ
್ಲ...ನಿಜಕ್ಕೂ ನಾಚಿಕೆಯಾಗುತ್ತಿದೆ...ನಿಮ್ಮ ರುಣವನ್ನು ನಾವು ತೀರಿಸಲು ಸಾಧ್ಯವೇ ಇಲ್ಲ ಹನುಮ೦ತಪ್ಪ....ನೀನು ಬದುಕಬೇಕು ಎ೦ದು ನಿನ್ನೆ ಅನೇಕ ಬಾರಿ ಪ್ರಾರ್ಥಿಸಿದೆ...
ಅದೊ೦ದೇ ಸಮಾಧಾನ..
https://m.facebook.com/story.php?story_fbid=10208453162466050&id=1216366751&refid=18&_ft_=qid.6250439866502039114%3Amf_story_key.1041247672564758%3Atl_objid.1041247672564758&tn=%2As

posted from Bloggeroid

No comments:

Post a Comment