Monday, February 8, 2016

ಪರ್ಫೆಕ್ಟ್ ಆರೋಗ್ಯಕ್ಕೆ ಸೇವಿಸಲೇಬೇಕು ಕ್ಯಾರೆಟ್

ಪರ್ಫೆಕ್ಟ್ ಆರೋಗ್ಯಕ್ಕೆ ಸೇವಿಸಲೇಬೇಕು ಕ್ಯಾರೆಟ್
Written by: CM prasad | Sat, Feb 6, 2016, 23:17 [IST]
ಆರೋಗ್ಯದ ಸಮರ್ಪಕ ಆರೈಕೆಗೆ ಅನೇಕ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತದೆ. ಈ ವಿಧಾನಗಳಲ್ಲಿ ವೈವಿಧ್ಯಮಯ ಆಹಾರ ಪದ್ಧತಿಗಳೂ ಸಹ ಒಂದು ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ನಮಗೆ ಸುಲಭವಾಗಿ ಸಿಗುವ ಪೌಷ್ಠಿಕಾಂಶಯುಕ್ತ ಪ್ರಾಕೃತಿಕ ಆಹಾರಗಳನ್ನು ಸೇವಿಸುವ ಬದಲು ಸಂಸ್ಕರಿಸಿ ಮತ್ತು ರುಚಿಗೆ ಹೆಚ್ಚು ಆದ್ಯತೆ ನೀಡುವ ತಿನಿಸುಗಳತ್ತ ಮುಖ ಮಾಡುತ್ತಿದ್ದೇವೆ. ಇದು ನಿಜಕ್ಕೂ ಕಳಕವಳಕಾರಿ ಬೆಳವಣಿಗೆ. ಆದ್ದರಿಂದ ಇಂದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗುವ ಆಹಾರದ ಬಗ್ಗೆ ತಿಳಿಸುತ್ತಿದ್ದು, ಈ ಲೇಖನದ ಕಥಾವಸ್ತು ಕ್ಯಾರೆಟ್. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್ ಹೌದು! ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಸೇವಿಸಬಹುದಾದ ಆರೋಗ್ಯಕ್ಕೆ ನೆರವಾಗುವ ತರಕಾರಿಗಳಲ್ಲಿ ಕ್ಯಾರೆಟ್ ಅನ್ನು ಕಡೆಗಣಿಸುವಂತಿಲ್ಲ. ಕ್ಯಾರೆಟ್‌ನಿಂದ ಸಂತಾನೋತ್ಪತ್ತಿಯ ಶಕ್ತಿ ಅಧಿಕಗೊಂಡು, ವೀರ್ಯದ ಗುಣ ಮತ್ತು ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದ್ದು, ಇದನ್ನು ಒಳ್ಳೆಯ ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ಕ್ಯಾರೆಟ್‌ನ ಆರು ವಿವಿಧ ಉಪಯೋಗಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಇದರಿಂದ ನಿಮ್ಮ ಆರೋಗ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ವಿವರಗಳಿಗೆ ಮುಂದೆ ಓದಿ...

Read more at: http://kannada.boldsky.com/health/wellness/2016/what-are-the-health-benefits-carrots-11303.html

posted from Bloggeroid

No comments:

Post a Comment