Tuesday, February 9, 2016

ಎಚ್ಚರ: ಲೈಫ್‌ನಲ್ಲಿ ಇಂತಹ ತಪ್ಪುಗಳನ್ನು ಮಾತ್ರ ಮಾಡಬೇಡಿ!

ಎಚ್ಚರ: ಲೈಫ್‌ನಲ್ಲಿ ಇಂತಹ ತಪ್ಪುಗಳನ್ನು ಮಾತ್ರ ಮಾಡಬೇಡಿ!
Tue, Nov 17, 2015, 10:44 [IST]
ಸವಲತ್ತುಗಳು ಹೆಚ್ಚಾಗುತ್ತಿದ್ದಂತೆ ನಾವು ಹೆಚ್ಚು ಸೋಮಾರಿಗಳಾಗುತ್ತಿದ್ದೇವೆ. ಅಂತೆಯೇ ನಮ್ಮ ದಿನಚರಿಗಳೂ ಬದಲಾಗುತ್ತಿವೆ. ತಡರಾತ್ರಿಯವರೆಗೆ ಪಾರ್ಟಿ ಮಾಡುವುದು ಮತ್ತು ಬೆಳಗ್ಗಿನ ಜಾವ ತಡವಾಗಿ ಏಳುತ್ತಿದ್ದೇವೆ. ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದೂ ಪ್ರತಿಷ್ಠೆಗಾಗಿ ಹಾನಿಕಾರಕ ಪಾನೀಯಗಳನ್ನು ಸೇವಿಸುತ್ತಿದ್ದೇವೆ. ಒಟ್ಟಾರೆ, ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಧಾವಿಸುತ್ತಿದ್ದೇವೆ. ನಿಸರ್ಗಕ್ಕೆ ವಿರುದ್ಧವಾಗಿ ನಡೆದವರು ಯಾರೂ ಎಂದಿಗೂ ಯಶಸ್ವಿಯಾಗಿಲ್ಲ. ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳನ್ನು ಹಿರಿಯರು ಕಂಡುಹಿಡಿದು ಸೂಕ್ತಮಾರ್ಗದಲ್ಲಿ ನಡೆಯಲು ಬುದ್ಧಿ ಹೇಳುತ್ತಾರೆ. ಹಿರಿಯರಿರಬೇಕು ಮನೆಯಲ್ಲಿ ಎಂದು ಇದಕ್ಕೇ ಹೇಳುವುದು. ಆದರೆ ಅವರ ವಯಸ್ಸನ್ನು ಹಳೆಯ ಕಾಲದ ಗೊಡ್ಡು ಎಂದು ಹೀಯಾಳಿಸುವ ನಾವು ಅವರ ಮುಂದೆ ಗೋಣು ಅಲ್ಲಾಡಿಸಿದರೂ ಅವರಿಂದ ತಪ್ಪಿಸಿಕೊಂಡ ಮರುಕ್ಷಣವೇ ಹೆಂಡಕುಡಿಸಿದ ಕಪಿಯಾಗುತ್ತೇವೆ.ಆದರೆ ನಮ್ಮ ಈ ಕೆಲವು ಅಭ್ಯಾಸಗಳು ದುರಭ್ಯಾಸವೆಂದು ನಮಗೆ ಗೊತ್ತೇ ಇರುವುದಿಲ್ಲ. ಎಲ್ಲಿಯವರೆಗೆ ಎಂದರೆ ಇದು ಒಂದು ಹಂತದಲ್ಲಿ ಹಠಾತ್ತಾಗಿ ಧಾಳಿ ಇಡುವವರೆಗೆ. ಮೊಬೈಲಿನ ಸತತ ಬಳಕೆಯಿಂದ ಯಾವ ರೀತಿ ಹಾನಿಯಾಗಬಹುದು? ತಡರಾತ್ರಿಯವರೆಗೆ ಜಾಗರಣೆ ಇರುವ ಕೆಡುಕುಗಳೇನು? ವಾಹನ ಚಲಾಯಿಸುವಾಗ ಧಾವಂತದ ದುರಂತವೇನಾಗಬಹುದು? ಇಂತಹ ಪ್ರಶ್ನೆಗಳನ್ನು ಯುವಜನತೆಗೆ ಕೇಳಿದರೆ ಈ ಪ್ರಶ್ನೆ ಕೇಳಿದ ನಿಮ್ಮನ್ನೇ ಅವರು ಗತಕಾಲದ ಭೂತದಂತೆ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ಇವೆಲ್ಲಾ ಜೀವನದ ಥ್ರಿಲ್‌ಗಳು! ನಿಮ್ಮನ್ನು ನಿಧಾನವಾಗಿ ಸಾಯಿಸುತ್ತಿರುವ ನಿಮಗೆ ಅರಿವೇ ಇಲ್ಲದ ಅಭ್ಯಾಸಗಳ ವಾಸ್ತವವೇನು ಎಂದು ಅರಿಯಬೇಕೇ? ಕೆಳಗಿನ ಸ್ಲೈಡ್ ಶೋ ನೋಡಿ.

Read more at: http://kannada.boldsky.com/health/diet-fitness/2015/health-mistakes-that-can-kill-010148-010148.html

posted from Bloggeroid

No comments:

Post a Comment