Tuesday, February 9, 2016

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!
Sun, Jan 17, 2016, 11:53 [IST]
Comments (0)

ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವ ಭಿನ್ನವಾಗಿದೆ. ಕೇವಲ ವ್ಯಕ್ತಿಯ ಚಹರೆ ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ತೋರ್ಪಡಿಸುವುದಿಲ್ಲ. ವಾಸ್ತವವಾಗಿ ನೋಡಲು ಸುಂದರವಾಗಿ ಕಾಣುವ ವ್ಯಕ್ತಿಗಳು ಕೇವಲ ಆಕರ್ಷಣೀಯವಾಗಿರುತ್ತಾರೆಯೇ ವಿನಃ ಅವರ ನಿಜವಾಜ ವ್ಯಕ್ತಿತ್ವವೇ ನೈಜ ಸೌಂದರ್ಯವಾಗಿದೆ. ನೋಡಲು ಸುಂದರರಲ್ಲದ ಗಾಂಧೀಜಿ ಜಗತ್ತಿನ ಆಕರ್ಷಣೆ ಪಡೆದಿರಲು ಅವರ ವ್ಯಕ್ತಿತ್ವವೇ ಕಾರಣ. ಆದರೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅವರ ಬಾಹ್ಯ ರೂಪಕ್ಕಿಂತಲೂ ಅವರ ಆಂತರಿಕ ಲಕ್ಷಣಗಳು ಹೆಚ್ಚು ಸಂಬಂಧಪಟ್ಟಿವೆ.

ಅದರಲ್ಲೂ ಮುಖ್ಯವಾಗಿ ಪ್ರತಿ ವ್ಯಕ್ತಿಯ ರಕ್ತದ ಗುಂಪು ಆ ವ್ಯಕ್ತಿಯ ಮನೋಭಾವ, ಆರೋಗ್ಯ, ಸಹಜಗುಣ ಮತ್ತು ಯಾವ ಕ್ಷೇತ್ರದಲ್ಲಿ ಇವರು ಸಬಲರು ಮತ್ತು ಅಸಮರ್ಥರು ಎಂಬ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ. ಇದನ್ನು ಯಾವುದೇ ಜ್ಯೋತಿಷಿ ಅಥವಾ ಸಾಮಾನ್ಯರು ಹೇಳಿದ್ದಲ್ಲ, ಜಪಾನ್ ನಲ್ಲಿ ನಡೆದ ಒಂದು ಸಂಶೋಧನೆಯ ಮೂಲಕ ಈ ಬಗ್ಗೆ ಅತಿ ಆಳವಾದ ಅಧ್ಯಯನ ನಡೆಸಿದ ತಜ್ಞರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಓರ್ವ ವ್ಯಕ್ತಿಯ ರಕ್ತದ ಗುಂಪು ಮತ್ತು ಇತರ ವಿವರಗಳನ್ನು ಪಡೆದು ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ಇದೇ ಕಾರಣಕ್ಕೆ ಜಪಾನಿನ ಜ್ಯೋತಿಷಿಗಳು (ಹೌದು, ಜಪಾನ್‌ ನಲ್ಲಿಯೂ ಜ್ಯೋತಿಷಿಗಳಿದ್ದಾರೆ) ವ್ಯಕ್ತಿಯ ಕುಂಡಲಿಯ ಬದಲಿಗೆ ರಕ್ತದ ಗುಂಪು ಯಾವುದು ಎಂದು ವಿಚಾರಿಸುತ್ತಾರೆ.

ಅಷ್ಟಕ್ಕೂ ರಕ್ತದ ಗುಂಪಿನಿಂದ ವ್ಯಕ್ತಿತ್ವ ಗೊತ್ತಾದರೇನು ಫಲ? ಇದನ್ನು ಇತರ ವಿಧಾನದಿಂದಲೂ ಪಡೆದುಕೊಳ್ಳಬಹುದಲ್ಲವೇ? ಹೌದು, ವ್ಯಕ್ತಿತ್ವದ ಬಗ್ಗೆ ವಿವರ ಪಡೆದುಕೊಳ್ಳಬಹುದಾದರೂ ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯದ ಅಪಾಯಗಳನ್ನಲ್ಲ. ರಕ್ತದ ಗುಂಪಿನಿಂದ ಈ ಬಗ್ಗೆ ಹಲವು ಮುನ್ನೆಚ್ಚರಿಕೆ ಪಡೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಭಾರೀ ಗಂಡಾಂತರದಿಂದ ಪಾರಾಗಬಹುದು.

ಮನುಷ್ಯರ ರಕ್ತವನ್ನು ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ, ಬಿ, ಎಬಿ ಮತ್ತು ಒ ಎಂಬ ಹೆಸರಿನ ಈ ನಾಲ್ಕು ಗುಂಪಿನ ರಕ್ತಗಳು ಪ್ರೇಮ, ಉದ್ಯೋಗ, ಸಾಮಾಜಿಕ ಜೀವನ, ಸಮಾಜದಲ್ಲಿರುವ ವ್ಯಕ್ತಿಗಳೊಂದಿಗೆ ಒಡನಾಟ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ರಕ್ತದ ಗುಂಪು ಯಾವುದು ಎಂದು ತಿಳಿದುಕೊಂಡಿರುವುದು.

ಒಂದು ವೇಳೆ ನಿಮಗೆ ಗೊತ್ತಿದ್ದರೆ ನಿಮ್ಮ ಬಗ್ಗೆ ನಿಮಗೇ ಅರಿವಿರದ ಹಲವು ಕುತೂಹಲಕಾರಿ ವಿಷಯಗಳನ್ನು ಕೆಳಗಿನ ಲೇಖನದಲ್ಲಿ ನೀಡಿರುವ ಮಾಹಿತಿಗಳು ಬಹಿರಂಗಪಡಿಸಿ ನಿಮ್ಮನ್ನು ಚಕಿತಗೊಳಿಸಬಹುದು. ಅಷ್ಟೇ ಅಲ್ಲ, ನಿಮ್ಮ ನಿಕಟವರ್ತಿಗಳ ರಕ್ತದ ಗುಂಪನ್ನು ಅರಿಯುವ ಮೂಲಕ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಎಚ್ಚರ ವಹಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಮ್ಮ ನಡುವಣ ಗೋಮುಖವ್ಯಾಘ್ರಗಳನ್ನು ಅರಿಯಲು ಇದರಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರರು ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪಡೆಯಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ:

http://kannada.boldsky.com/insync/pulse/2015/things-your-blood-type-says-about-you-10985.html#slide46248

posted from Bloggeroid

No comments:

Post a Comment