Thursday, February 11, 2016

ಕೋಕಂ ಶರಬತ್ತು- ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..

ಕೋಕಂ ಶರಬತ್ತು- ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..
Written by: manu
| Wed, Feb 10, 2016, 11:47 [IST]
Comments (0)

ನಮಗೆಲ್ಲಾ ನಮ್ಮ ಹಿತ್ತಲ ಮರದಲ್ಲಿ ಬೆಳೆದ ಯಾವುದೇ ಹಣ್ಣಾದರೂ ಅದು ಬೇಡ. ಆದರೆ ಇದೇ ಹಣ್ಣನ್ನು ಯಾವುದೋ ಬಹುರಾಷ್ಟ್ರೀಯ ಸಂಸ್ಥೆ ಸುಂದರವಾದ ಹೊರಕವಚವಿರುವ ಡಬ್ಬಿಯಲ್ಲಿ ಸಂರಕ್ಷಕ ದ್ರವಗಳೊಂದಿಗೆ ಸೇರಿಸಿ ಮಾರಿದರೆ ಅದು ನಮಗೆ ಅಮೃತಸಮಾನ. ನಮ್ಮ ಕರಾವಳಿಯಲ್ಲಿ, ಮಲೆನಾಡಿನಲ್ಲಿ, ಹೇರಳವಾಗಿ ಬೆಳೆಯುವ ಪುನರ್ಪುಳಿಯನ್ನು (ಕೋಕಂ, ಮುರುಗನ ಹುಳಿ) ಕೇಳುವವರಿಲ್ಲ. ಆದರೆ ಮಹಾರಾಷ್ಟ್ರದಿಂದ ಇತ್ತೀಚೆಗೆ ಸುಂದರ ಬಾಟಲಿಗಳಲ್ಲಿ ಲಭ್ಯವಾಗುತ್ತಿರುವ ಕೋಕಂ ಶರಬತ್ ಅಥವಾ ಕೋಕಂ ಡ್ರಿಂಕ್ ಎಂಬ ಹೆಸರಿನಲ್ಲಿ ಬಂದಾಕ್ಷಣ ಎಲ್ಲರೂ ಹೊಸರುಚಿಯಂತೆ ಕುಡಿದು ಚಪ್ಪರಿಸುತ್ತಾರೆ.

ಇದರ ಆರೋಗ್ಯಕರ ಗುಣಗಳನ್ನು ಆ ಬಾಟಲಿಯ ಮೇಲೂ ಮುದ್ರಿಸಲಾಗಿರುತ್ತದೆ. ಆದರೆ ಈ ಆರೋಗ್ಯಕರ ಗುಣಗಳನ್ನು ಸಂಪೂರ್ಣವಾಗಿ ಪಡೆಯಬೇಕಾದರೆ ಸಂರಕ್ಷಕಗಳಿಲ್ಲದ ಪುನರ್ಪುಳಿ ದ್ರವವನ್ನು ಸೇವಿಸಬೇಕು. Garcinia indica ಎಂಬ ವೈಜ್ಞಾನಿಕ ಹೆಸರಿರುವ ಈ ಹುಳಿಮಿಶ್ರಿತ ಸಿಹಿಹಣ್ಣು ಭಾರತಾದ್ಯಂತ ಬೆಳೆಯಲಾಗುತ್ತದಾದರೂ ಪಶ್ಚಿಮ ಘಟ್ಟಗಳಲ್ಲೇ ಬೆಳೆ ಹೆಚ್ಚು. ಪ್ರಖರ ಕೆಂಪು ಬಣ್ಣದ ಮತ್ತು ಹುಳಿ ಇರುವ ಈ ಹಣ್ಣನ್ನು

ಹಾಗೇ ತಿನ್ನಬಹುದು ಅಥವಾ ಒಣಗಿಸಿ ವರ್ಷವಿಡೀ ಸೇವಿಸಬಹುದು. ಇದರ ಜ್ಯೂಸ್ ಸಹಾ ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಖನಿಜಗಳೂ ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವಲ್ಲಿ ಒಂದಲ್ಲ ಒಂದು ರೀತಿ ಸಹಕರಿಸುತ್ತವೆ. ಟ್ಯಾನ್ ಆಗೋದನ್ನು ತಪ್ಪಿಸಿಕೊಳ್ಳಲು ಕೋಕಂ ಕೇರ್

ವಿಶೇಷವಾಗಿ ಒಂದು ಲೋಟ ಕೋಕಂ ಜ್ಯೂಸ್ ಅನ್ನು ಊಟದ ಬಳಿಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಒಣಗಿಸಿದ ತಿರುಳು ಸಹಾ ಪೋಷಕಾಂಶಗಳ ಆಗರವಾಗಿದೆ. ಹುಣಸೆ ಹುಳಿಯ ಬದಲಿಗೆ ಇದನ್ನು ಮಂಗಳೂರಿನ ಕರಾವಳಿ ಕಡೆಗಳಲ್ಲಿ ಹಾಗೂ ಕೇರಳದಲ್ಲಿ ಮೀನಿನ ಸಾರಿಗೆ ಉಪಯೋಗಿಸುತ್ತಾರೆ.

ಇದರ ಹುಳಿಯಾದ ರುಚಿಗೆ ಇದರಲ್ಲಿರುವ ಮ್ಯಾಲಿಕ್ ಆಮ್ಲ, ಅಸೆಟಿಕ್ ಆಮ್ಲ, ಹೈಡ್ರೋಸಿಟ್ರಿಕ್ ಆಮ್ಲ ಮತ್ತು ಹೈಡ್ರಾಕ್ಸಿ ಸಿಟ್ರಿಕ್ ಆಮ್ಲಗಳು ಕಾರಣವಾಗಿವೆ. ಇವುಗಳ ಉಪಸ್ಥಿತಿಯ ಕಾರಣ ಇದೊಂದು ಉತ್ತಮ ಬ್ಯಾಕ್ಟೀರಿಯಾ ನಿವಾರಕ, ಸೋಂಕು ನಿವಾರಕ, ಉರಿಯೂತ ನಿವಾರಕ ಹಾಗೂ ಕ್ಯಾನ್ಸರ್ ನಿವಾರಕವೂ ಆಗಿದೆ. ನಿಯಮಿತವಾಗಿ ಕೋಕಂ ಶರಬತ್ತು ಕುಡಿಯುತ್ತಾ ಬರುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಈ ಲಾಭಗಳ ಬಗ್ಗೆ ಅರಿಯೋಣ....
http://kannada.boldsky.com/health/wellness/2016/amazing-health-benefits-kokum-juice-11328.html#slide47866

posted from Bloggeroid

No comments:

Post a Comment